ಧಾರವಾಡ : ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ ತೋರಿದ ಹಿನ್ನೆಲೆ ಮೂವರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರ ಜತೆಗೆ ಅನುಚಿತ ವರ್ತನೆ : ಮೂವರು ಪೇದೆಗಳನ್ನ ಅಮಾನತುಗೊಳಿಸಿದ ಧಾರವಾಡ ಎಸ್‌ಪಿ - undefined
ಸಾರ್ವಜನಿಕರೊಂದಿಗೆ ಅನುಚಿತವಾಗಿ ಪೇದೆಗಳು ವರ್ತಿಸಿದ್ದರು. ಈ ಹಿನ್ನೆಲೆ ಮೂವರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಆದೇಶ ಹೊರಡಿಸಿದ್ದಾರೆ.
ಪೇದೆಗಳ
ಜಿಲ್ಲೆಯ ನವಲಗುಂದ ಠಾಣೆಯಲ್ಲಿ ಕೆಲಸ ನಿರ್ವಹಿಸುವ ಮಲ್ಲರೆಡ್ಡಿ ನಿಂಗಾವರ, ನಿಂಗರೆಡ್ಡಿ ಹೆಬ್ಬಾಳ ಮತ್ತು ಸದ್ದಾಂ ತಲ್ಲೂರ ಅಮಾನತುಗೊಂಡ ಪೇದೆಗಳಾಗಿದ್ದಾರೆ. ಎರಡು ದಿನಗಳ ಹಿಂದೆ ಸಾರ್ವಜನಿಕರೊಂದಿಗೆ ಅನುಚಿತವಾಗಿ ಪೇದೆಗಳು ವರ್ತಿಸಿದ್ದರು. ಸಾರ್ವಜನಿಕರು ಇವರ ವರ್ತನೆ ಖಂಡಿಸಿ ನವಲಗುಂದ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ಮೂವರು ಪೇದೆಗಳ ಮೇಲೆ ಇಲಾಖೆ ತನಿಖೆ ಕಾಯ್ದಿರಿಸಿ ಅಮಾನತು ಮಾಡಿ ಎಸ್‌ಪಿ ಜಿ. ಸಂಗೀತಾ ಆದೇಶಿಸಿದ್ದಾರೆ.