ಹುಬ್ಬಳ್ಳಿ :ಮೂರುಸಾವಿರ ಮಠದ ಉತ್ತರಾಧಿಕಾರ ವಿವಾದಕ್ಕೆ ಸಂಬಂಧಿಸಿದಂತೆ ಮಠದಲ್ಲಿ ಭಾನುವಾರ ಸತ್ಯಶೋಧನಾ ಸಭೆ ನಡೆಯಲಿರುವ ಹಿನ್ನೆಲೆ ಇಂದು ಮಠದಲ್ಲಿ ಮಹತ್ವದ ಸಭೆಯನ್ನು ಕರೆಯಲಾಗಿದೆ.
ಉತ್ತರಾಧಿಕಾರ ವಿವಾದ.. ಭಾನುವಾರ ಸತ್ಯಶೋಧನಾ ಸಭೆ.. ಇಂದು ಹುಬ್ಬಳ್ಳಿ 3000ಮಠದಲ್ಲಿ ಮಹತ್ವದ ಮೀಟಿಂಗ್ - ಸತ್ಯಶೋಧನಾ ಸಭೆ
ಸಭೆಯಲ್ಲಿ ಭಾನುವಾರ ಮಠದಲ್ಲಿ ಕರೆಯಲಾಗಿರುವ ಸತ್ಯಶೋಧನಾ ಸಭೆಗೆ ಅವಕಾಶ ನೀಡಬೇಕಾ ಅಥವಾ ಬೇಡವಾ ಎಂಬ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
23ರಂದು ಮಠದಲ್ಲಿ ಕರೆದ ಸಭೆಗೆ ಮೂರುಸಾವಿರ ಮಠದ ಗುರುಸಿದ್ದರಾಜ ಯೋಗೀಂದ್ರ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇಂದು ಸ್ವಾಮೀಜಿಗಳ ನೇತೃತ್ವದಲ್ಲಿ ಮಠದ ಉನ್ನತ ಸಮಿತಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಉನ್ನತ ಮಟ್ಟದ ಸಮಿತಿಯ ಸದಸ್ಯರಾದ ಮೋಹನ ಲಿಂಬಿಕಾಯಿ, ಸಚಿವರುಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಭಾಪತಿಗಳಾದ ವೀರಣ್ಣ ಮತ್ತಿಕಟ್ಟಿ, ಬಸವರಾಜ ಹೊರಟ್ಟಿ ಮತ್ತು ಶಂಕ್ರಣ್ಣ ಮುನವಳ್ಳಿ ಪಾಲ್ಗೊಳ್ಳಲಿದ್ದಾರೆ. ಉತ್ತರಾಧಿಕಾರಿ ವಿವಾದದ ಹಿನ್ನೆಲೆಯಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ.
ಸಭೆಯಲ್ಲಿ ಭಾನುವಾರ ಮಠದಲ್ಲಿ ಕರೆಯಲಾಗಿರುವ ಸತ್ಯಶೋಧನಾ ಸಭೆಗೆ ಅವಕಾಶ ನೀಡಬೇಕಾ ಅಥವಾ ಬೇಡವಾ ಎಂಬ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಿದೆ.