ಹುಬ್ಬಳ್ಳಿ:ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಲು ಹೋದ ಪತಿ ಮೇಲೆ ಪತ್ನಿಯ ಪ್ರಿಯಕರ ನಾಯಿ ಛೂ ಬಿಟ್ಟು, ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೇಶ್ವಾಪುರದ ಮುಕ್ತಿ ಧಾಮದ ಬಳಿ ನಡೆದಿದೆ.
ಪತ್ನಿ ಅಕ್ರಮ ಸಂಬಂಧ ಪ್ರಶ್ನಿಸಲು ಹೋದ ಪತಿ: ನಾಯಿ ಛೂ ಬಿಟ್ಟ ಪ್ರಿಯಕರ - ಹುಬ್ಬಳ್ಳಿ ಕ್ರೈಂ ನ್ಯೂಸ್
ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಲು ಹೋದ ಪತಿ ಮೇಲೆ ಪತ್ನಿಯ ಪ್ರಿಯಕರ ನಾಯಿ ಛೂ ಬಿಟ್ಟು, ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ಮುಕ್ತಿ ಧಾಮದ ಬಳಿ ನಡೆದಿದೆ.
ಪತಿ ಸಂತೋಷ ಕಾಂಬ್ಳೆ ಸೇರಿದಂತೆ ಇಬ್ಬರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಶ್ವಾಪುರ ನಿವಾಸಿ ಸಂತೋಷ ಕಾಂಬ್ಳೆ ಹಾಗೂ ರೂಪಾದೇವಿ ಮದುವೆಯಾಗಿದ್ದರು. ಆದ್ರೆ ರೂಪಾದೇವಿ ಸನ್ನಿ ಎಂಬ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಷಯ ಪತಿ ಸಂತೋಷನಿಗೆ ತಿಳಿದು ಪತ್ನಿ ಅಕ್ರಮ ಸಂಬಂಧವನ್ನು ಪಶ್ನಿಸಲು ಪತ್ನಿ ಪ್ರಿಯಕರ ಸನ್ನಿ ಅವರ ಮನೆಗೆ ಹೋಗಿದ್ದಾನೆ. ಆಗ ಪ್ರಿಯಕರ ಸನ್ನಿ ಸಾಕು ನಾಯಿ ಚೂ ಬಿಟ್ಟು ಚಾಕುವಿನಿಂದ ದಾಳಿ ಮಾಡಿದ್ದಾನೆ. ಇದಲ್ಲದೇ ಜಗಳ ಬಿಡಿಸಲು ಬಂದ ಪತಿ ಕುಟುಂಬಸ್ಥರ ಮೇಲೂ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪತ್ನಿ ರೂಪಾದೇವಿ ಘಟನೆ ನಡೆಯುತ್ತಿದಂತೆ ತವರು ಮನೆ ಸೇರಿದ್ದಾಳೆ. ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.