ಧಾರವಾಡ:ಹಲವು ವಿರೋಧಗಳ ನಡುವೆ ಅವಳಿ ನಗರದ ಮಧ್ಯೆ ಬಿಆರ್ಟಿಎಸ್ ಸೇತುವೆ ನಿರ್ಮಿಸಿ ನಿತ್ಯ ಬಸ್ ಸಂಚಾರ ಪ್ರಾರಂಭವಾಗಿದೆ. ಆದರೆ, ಅಪಘಾತ, ಮುನ್ನೆಚ್ಚರಿಕಾ ಕ್ರಮಗಳ ಲೋಪಗಳ ಜತೆ ಕಾಮಗಾರಿಯಲ್ಲಿನ ಕಳಪೆ ಗುಣಮಟ್ಟ ಜನರನ್ನು ಕೆರಳಿಸಿದೆ.
ಬಿಆರ್ಟಿಎಸ್ ಸೇತುವೆ ಬಿರುಕು: ಪ್ರಯಾಣಿಕರಲ್ಲಿ ಆತಂಕ - undefined
ಅವಳಿ ನಗರದಲ್ಲಿ ತ್ವರಿತ ಸಾರಿಗೆ ಸೇವೆ ನೀಡಲು ನಿರ್ಮಿಸಿದ ಬಿಆರ್ಟಿಎಸ್ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ.
![ಬಿಆರ್ಟಿಎಸ್ ಸೇತುವೆ ಬಿರುಕು: ಪ್ರಯಾಣಿಕರಲ್ಲಿ ಆತಂಕ](https://etvbharatimages.akamaized.net/etvbharat/prod-images/768-512-3836359-thumbnail-3x2-dwd.jpg)
ಬಿಆರ್ಟಿಎಸ್ ಕಾಮಗಾರಿಯಲ್ಲಿನ ಲೋಪ ದೋಷಗಳಿಂದ ಸಾರ್ವಜನಿಕರಲ್ಲಿ ಆತಂಕ
ಬಿಆರ್ಟಿಎಸ್ ಕಾಮಗಾರಿಯಲ್ಲಿನ ಲೋಪ ದೋಷಗಳಿಂದ ಸಾರ್ವಜನಿಕರಲ್ಲಿ ಆತಂಕ
ನವಲೂರ ಬಳಿಯ ಬಿಆರ್ಟಿಎಸ್ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಹೆಚ್ಚಿಸಿದೆ. ಅವಳಿ ನಗರದ ತ್ವರಿತ ಸಾರಿಗೆ ಸೇವೆ ಒದಗಿಸುವ ಯೋಜನೆಯ ಕಾಮಗಾರಿಯಲ್ಲಿ ಅಕ್ರಮದ ವಾಸನೆ ಹರಿದಾಡುತ್ತಿದೆ.
ಸುಮಾರು 6 ವರ್ಷಗಳ ಕಾಲ ಸಮಯಾವಕಾಶ ತೆಗೆದುಕೊಂಡು, ಅವೈಜ್ಞಾನಿಕ ಕಾಮಗಾರಿ ಕೈಗೊಳ್ಳಲಾಗಿದೆ. 20 ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬುದು ಪ್ರಯಾಣಿಕರು, ಸಾರ್ವಜನಿಕರ ಆರೋಪ.