ಕರ್ನಾಟಕ

karnataka

ETV Bharat / state

ಅಕ್ರಮ ಗಾಂಜಾ ಮಾರಾಟಗಾರರು ಸೆರೆ; 15 ಸಾವಿರ ಮೌಲ್ಯದ ಗಾಂಜಾ ವಶ - ಹುಬ್ಬಳ್ಳಿ

ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗಾಂಜಾ ವಶ

By

Published : Sep 18, 2019, 8:49 PM IST

ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹೇಶ ಹಬೀಬ, ಸಿದ್ದು ಹಬೀಬ, ಗಜಾನನ ಮಿಸ್ಕಿನ್ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 15,000 ರೂ ಮೌಲ್ಯದ 1.6 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಅಕ್ರಮ ಗಾಂಜಾ ಮಾರಾಟಗಾರರು

ನಗರದ ತಾಡಪತ್ರ ಗಲ್ಲಿ ಕ್ರಾಸ್ ಬಳಿ ಅಕ್ರಮವಾಗಿ ಪ್ಯಾಕೆಟ್ ಮುಖಾಂತರ ಗಾಂಜಾ ಮಾರಾಟ ಮಾಡುತ್ತಿದ್ದರು‌. ಹು-ಧಾ ಪೋಲಿಸ್ ಆಯುಕ್ತ ಆರ್ ದೀಲಿಪ್ ಮಾರ್ಗದರ್ಶನದ ಮೇರೆಗೆ ಕಮೀರಪೇಟ್ ಪೋಲಿಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.ಈ ಸಂಬಂಧ ಕಮೀರಿಪೇಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details