ಹುಬ್ಬಳ್ಳಿ: ಬಿಸಿಯೂಟದ ಬದಲಿಗೆ ನೀಡಬೇಕಿರುವ ದಿನಸಿ ಕಿಟ್ ವಿತರಣೆಯಲ್ಲಿ ಅಕ್ರಮ ನಡೆದಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಪರಿಶೀಲನೆ ನಡೆಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಆಗ್ರಹಿಸಿದರು.
ಕೊರೊನಾ ಹಿನ್ನೆಲೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಾಜ್ಯದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲು ದಿನಸಿ ಕಿಟ್ ವಿತರಿಸಲು ಸರ್ಕಾರ ಆದೇಶ ನೀಡಿತ್ತು. ನಗರದ ಬೈರಿದೇವರಕೊಪ್ಪದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡುವ ಅಕ್ಕಿ, ಗೋಧಿ, ಬೇಳೆಯಲ್ಲಿ ಅಂದಾಜು 200ರಿಂದ 300 ಗ್ರಾಂ ಕಡಿಮೆ ವಿತರಿಸಲಾಗಿದೆ ಎಂದು ಆರೋಪಿಸಲಾಗಿದೆ.