ಕರ್ನಾಟಕ

karnataka

ETV Bharat / state

2019 - 20 ನೇ ಸಾಲಿನ ಬೆಳೆ ವಿಮೆ ಜಮೆ ಮಾಡದಿದ್ದರೆ ಹೋರಾಟ: ಶಾಸಕ ಸಿ.ಎಂ ನಿಂಬಣ್ಣವರ ಎಚ್ಚರಿಕೆ

2019-20 ನೇ ಸಾಲಿನ ಬೆಳೆ ವಿಮೆಯನ್ನು ವಿಮಾ ಕಂಪನಿಗಳು ಜಮೆ ಮಾಡದೇ ಇದ್ದರೆ, ರೈತರೊಂದಿಗೆ ಸೇರಿ ಹೋರಾಟ ಮಾಡಲಾಗುವುದು ಎಂದು ಶಾಸಕ ಸಿ.ಎಂ ನಿಂಬಣ್ಣವರ ಎಚ್ಚರಿಸಿದರು.

C.M Nimbunnawara
ಶಾಸಕ ಸಿ.ಎಂ ನಿಂಬಣ್ಣವರ

By

Published : Oct 5, 2020, 7:40 PM IST

ಕಲಘಟಗಿ: 2019-20 ನೇ ಸಾಲಿನ ಬೆಳೆವಿಮೆಯನ್ನು ವಿಮಾ ಕಂಪನಿಗಳು ಜಮೆ ಮಾಡದೇ ಇದ್ದರೆ, ರೈತರೊಂದಿಗೆ ಸೇರಿ ಹೋರಾಟ ಮಾಡಲಾಗುವುದು ಎಂದು ಶಾಸಕ ಸಿ.ಎಂ ನಿಂಬಣ್ಣವರ ಎಚ್ಚರಿಸಿದರು.

ಪಟ್ಟಣದಲ್ಲಿ ನಾಗರಿಕ ಸೇವಾ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಘಟಗಿ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ 2019-20 ರಲ್ಲಿ ಕಂಡು ಕೇಳಲಾರದ ರೀತಿಯಲ್ಲಿ ದೊಡ್ಡ ಪ್ರಮಾಣದ ಬೆಳೆ ನಷ್ಟ ಉಂಟಾಗಿದ್ದರು. ಬೆಳೆ ವಿಮಾ ಕಂಪನಿಗಳು ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ ವಿಮಾ ಹಣ ಬಿಡುಗಡೆ ಮಾಡಿಲ್ಲ, ಶೀಘ್ರ ವಿಮೆಯ ಹಣ ಅರ್ಹ ರೈತರಿಗೆ ಬಿಡುಗಡೆ ಮಾಡದೇ ಇದ್ದರೆ ಖಾಸಗಿ ವಿಮಾ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

ಇನ್ನು ಈ ಕಾರಣ ವಿಮಾ ಕಂಪನಿಗಳು ರೈತರ ಸಂಕಷ್ಟ ಅರಿತು ಅವರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details