ಕರ್ನಾಟಕ

karnataka

ETV Bharat / state

ಈದ್ಗಾ ಮೈದಾನದ ಗಣೇಶೋತ್ಸವ ಯಶಸ್ವಿ: ಪ್ರಮೋದ್ ಮುತಾಲಿಕ್ - Pramod Muthalik

ಅದ್ದೂರಿ ಗಣೇಶ ನಿಮಜ್ಜನ ಮೆರವಣಿಗೆಯಲ್ಲಿ ಪ್ರಮೋದ್ ಮುತಾಲಿಕ್ ಸೇರಿದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಹೆಜ್ಜೆ ಹಾಕಿದರು.

A grand Ganesha Nimajna procession
ಅದ್ದೂರಿ ಗಣೇಶ ನಿಮಜ್ಜನ ಮೆರವಣಿಗೆ

By

Published : Sep 2, 2022, 3:21 PM IST

ಹುಬ್ಬಳ್ಳಿ:ಈದ್ಗಾದಲ್ಲಿ ಗಣೇಶೋತ್ಸವ ಆಚರಣೆ ಸಾಕಷ್ಟು ವಿರೋಧದ ನಡುವೆ ವ್ಯವಸ್ಥಿತವಾಗಿ ಪೂರ್ಣಗೊಂಡಿದೆ. ಅದ್ದೂರಿ ಗಣೇಶ ನಿಮಜ್ಜನ ಮೆರವಣಿಗೆ ನಡೆದಿದೆ.

ವಿವಿಧ ಕಲಾತಂಡಗಳ, ವಾದ್ಯಮೇಳಗಳು ಭಾಗಿಯಾಗಿದ್ದು, ಮೆರವಣಿಗೆಯಲ್ಲಿ ರಾರಾಜಿಸುತ್ತಿರುವ ಭಾಗಧ್ವಜಗಳು, ನಾಸಿಕ್ ಡೋಲ್, ಝಾಂಜ್ ಮೇಳಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಹೆಜ್ಜೆ ಹಾಕಿದರು. ಇಂದಿರಾ ಗಾಜಿನ ಮನೆಯ ಪಕ್ಕದಲ್ಲಿ ಬಾವಿಯಲ್ಲಿ ಗಣೇಶ ನಿಮಜ್ಜನ ಮಾಡಲಾಗಿದೆ. ಮೆರವಣಿಗೆ ಉದ್ದಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.

ಅದ್ದೂರಿ ಗಣೇಶ ನಿಮಜ್ಜನ ಮೆರವಣಿಗೆ

ನಗರದ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾದ ಗಣೇಶ ಮೂರ್ತಿಯ ನಿಮಜ್ಜನ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಐತಿಹಾಸಿಕವಾದ ಈದ್ಗಾ ಮೈದಾನದ ಗಣೇಶೋತ್ಸವ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ವಿರೋಧಿಗಳು ಎಷ್ಟೇ ಅಡ್ಡಿ ಮಾಡಲು ತಂತ್ರ ರೂಪಿಸಿದರೂ ಗಣೇಶನ ಆಶೀರ್ವಾದ ನಮಗೆ ಸಿಕ್ಕಿದೆ ಎಂದು ಹೇಳಿದರು.

ಈ ವರ್ಷದ ಮೂರು ದಿನದ ಗಣೇಶೋತ್ಸವ ಕಾರ್ಯಕ್ರಮ ಹಿಂದೂ ಸಂಘಟನೆಗಳು, ಎಲ್ಲ ಗಣೇಶ ಮಂಡಳಿಗಳ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿದೆ.‌ ಈ ಕಾರ್ಯ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸರ್ಕಾರ, ಕೋರ್ಟ್, ಮೇಯರ್ ಅವರಿಗೆ ಹಿಂದೂಪರ ಸಂಘಟನೆಗಳಿಂದ ಧನ್ಯವಾದಗಳು. ಈದ್ಗಾ ಮೈದಾನದಲ್ಲಿ ಈ ಬಾರಿ ಮೂರೇ ದಿನ ಕಾರ್ಯಕ್ರಮ ಮಾಡಲಾಗಿದೆ. ಮುಂದೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಕಾರ್ಯಕ್ರಮ ಮಾಡೋಣ ಎಂದರು.

ಅದ್ದೂರಿ ಗಣೇಶ ನಿಮಜ್ಜನ ಮೆರವಣಿಗೆ

ನಾವು 75 ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಇದ್ದೇವೆ. ಆದರೆ ನಮ್ಮ ನೆಲದಲ್ಲಿ ಗಣೇಶೋತ್ಸವ ಆಚರಣೆ ಮಾಡಲು ನ್ಯಾಯಾಲಯದ ಕಟ್ಟೆಗೆ ಹೋಗಬೇಕು. ಇದೀಗ ಹಿಂದೂಗಳು ಒಂದಾಗಿದ್ದೇವೆ. ಇದಕ್ಕೆ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ನಡೆದ ಗಣೇಶೋತ್ಸವ ಸಾಕ್ಷಿ. ಈವರೆಗೆ ಎಲ್ಲ ಶಾಂತಿಯಿಂದ ಗಣೇಶ ಚತುರ್ಥಿ ಆಚರಣೆ ಮಾಡಿದ್ದೇವೆ. ಅದರಂತೆ ನಿಮಜ್ಜನ ಕಾರ್ಯಕ್ರಮವನ್ನು ಕೂಡ ಶಾಂತಿಯಿಂದ ನೆರವೇರಿಸೋಣ ಎಂದು ಪ್ರಮೋದ್ ಮುತಾಲಿಕ್ ಮನವಿ ಮಾಡಿದರು.

ಇನ್ನು ಚಿತ್ರದುರ್ಗದ ಮುರುಘಾಮಠದ ಶರಣರ ಬಂಧನದ ಕುರಿತು ಮಾತನಾಡಿದ ಅವರು, ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಶ್ರೀಗಳ ಕಡೆಯವರು ಇದೊಂದು ಷಢ್ಯಂತ್ರ ಎಂದು ಹೇಳುತ್ತಾರೆ. ಸಂತ್ರಸ್ತರ ಕಡೆಯವರು ಪ್ರಕರಣ ದಾಖಲಿಸಿದ್ದಾರೆ. ತನಿಖೆಯಿಂದ ಸತ್ಯಾ ಸತ್ಯತೆ ಹೊರಬರಲಿದೆ ಎಂದರು.

ಇದನ್ನೂ ಓದಿ :ಸಾವರ್ಕರ್ ಫೋಟೋ ವಿವಾದಕ್ಕೆ ಪಾಲಿಕೆ ಬ್ರೇಕ್.. ಏಕಾಏಕಿ ಫೋಟೋ ಫ್ಲೆಕ್ಸ್ ತೆರವು

ABOUT THE AUTHOR

...view details