ಕರ್ನಾಟಕ

karnataka

ETV Bharat / state

ಈದ್ಗಾ ವಿವಾದ ಎಫೆಕ್ಟ್: ಪಾರ್ಕಿಂಗ್ ಇಲ್ಲ, ದುಡಿಮೆಯೂ ಇಲ್ಲ.. ಬಡಪಾಯಿಗಳ ಗೋಳು

ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ ವಾಹನ ಪಾರ್ಕಿಂಗ್ ತೆರವುಗೊಳಿಸಿದ್ದ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಈಗ ಟ್ಯಾಕ್ಸಿ ಫರ್ಮಿಟ್ ವಾಹನಗಳಿಗೆ ಸ್ಥಳಾವಕಾಶ ನೀಡದೇ ಇರುವ ಹಿನ್ನೆಲೆ ವಾಹನ ಚಾಲಕರು ಕಣ್ಣೀರು ಹಾಕುತ್ತಿದ್ದಾರೆ.

idga-controversy-effect-on-auto-car-drivers
ಈದ್ಗಾ ವಿವಾದ ಆಟೋ ಚಾಲಕರ ಮೇಲೆ ಎಫೆಕ್ಟ್

By

Published : Sep 13, 2022, 1:33 PM IST

ಹುಬ್ಬಳ್ಳಿ:ಇದು ಸಾಕಷ್ಟು ವಿವಾದ ಸೃಷ್ಟಿಸಿದ್ದ ಮೈದಾನ. ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಸದ್ದು ಮಾಡಿದ್ದ ಆ ಒಂದು ಮೈದಾನ ಈಗ ನೂರಾರು ಕುಟುಂಬಗಳ ಕಣ್ಣೀರಿಗೆ ಕಾರಣವಾಗಿದೆ.

ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡಿಕೊಂಡ ವಾಹನ ಚಾಲಕರು ಹಾಗೂ ಮಾಲೀಕರು.. ಮೊದಲಿದ್ದ ಸ್ಥಳದಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ಕೋರುತ್ತಿರುವ ಸಾರಥಿಗಳು. ಇದೆಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿಯ ಈದ್ಗಾ ಮೈದಾನ. ಸುಮಾರು ವರ್ಷಗಳಿಂದ ನೂರಾರು ಟ್ಯಾಕ್ಸಿ ಪರ್ಮಿಟ್ ವಾಹನಗಳ ನಿಲುಗಡೆ ಸ್ಥಳವಾಗಿದ್ದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರ ಮುನ್ನೆಲೆಗೆ ಬಂದಿದ್ದೇ ತಡ ಇಲ್ಲಿನ ನೂರಾರು ಕುಟುಂಬದ ಕಣ್ಣೀರು ಕೆನ್ನೆಗೆ ಜಾರಿದೆ.

ಈದ್ಗಾ ವಿವಾದ ಆಟೋ ಚಾಲಕರ ಮೇಲೆ ಎಫೆಕ್ಟ್

ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ ವಾಹನ ಪಾರ್ಕಿಂಗ್ ತೆರವುಗೊಳಿಸಿದ್ದ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಈಗ ಟ್ಯಾಕ್ಸಿ ಪರ್ಮಿಟ್ ವಾಹನಗಳಿಗೆ ಸ್ಥಳಾವಕಾಶ ನೀಡದೇ ಇರುವ ಹಿನ್ನೆಲೆ ವಾಹನ ಚಾಲಕರು ಸಂಕಷ್ಟಕ್ಕೆ ಅನುಭವಿಸುತ್ತಿದ್ದಾರೆ. ಈ ಮೈದಾನದಲ್ಲಿ ಪಾರ್ಕ್ ಮಾಡುವುದರಿಂದ ನಮ್ಮ ಜೀವನ ಚೆನ್ನಾಗಿತ್ತು. ಈಗ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇಲ್ಲದ್ದರಿಂದ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಅಂತಿದ್ದಾರೆ ವಾಹನ ಚಾಲಕರು ಹಾಗೂ ಮಾಲೀಕರು.

ಮೇಯರ್​ರಿಂದ ಸಮಸ್ಯೆ ಸರಿಪಡಿಸುವ ಭರವಸೆ.. ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಸ್ಥಳಾವಕಾಶ ನೀಡದೇ ಇರುವ ಹಿನ್ನೆಲೆಯಲ್ಲಿ ನೂರಾರು ಕುಟುಂಬಗಳು ಬೀದಿಗೆ ಬೀಳುವ ಭಯದಲ್ಲಿಯೇ ಜೀವನ ನಡೆಸುತ್ತಿವೆ. ಇರುವ ದುಡಿಮೆಗೆ ಈಗ ಕೊಡಲಿ ಪೆಟ್ಟು ಬಿದ್ದಿದ್ದು, ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ ಎಂದು ನೋವನ್ನು ತೋಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರು ಕೂಡಲೇ ವ್ಯವಸ್ಥೆ ಸರಿಪಡಿಸುವ ಬಗ್ಗೆ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಸರ್ಕಾರಿ ಇಲಾಖೆಯ ನಿರ್ಧಾರವೋ ಅಥವಾ ಹೋರಾಟದ ಬಿಸಿಯೋ ಗೊತ್ತಿಲ್ಲ. ಈದ್ಗಾ ಮೈದಾನದಲ್ಲಿ ಆಸರೆ ಪಡೆದುಕೊಂಡಿದ್ದ ಕುಟುಂಬಗಳಿಗೆ ಬರಸಿಡಿಲು ಬಂದಂತಾಗಿದೆ. ಕೂಡಲೇ ಈ ಬಗ್ಗೆ ಸೂಕ್ತ ಕ್ರಮಗಳನ್ನು ಜರುಗಿಸಿ ಬಡಪಾಯಿಗಳ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ.

ಇದನ್ನೂ ಓದಿ:ಜನರಿಲ್ಲದೆ ಹುಬ್ಬಳ್ಳಿಯ ಈದ್ಗಾ ಮೈದಾನ ಖಾಲಿ ಖಾಲಿ: ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು!

ABOUT THE AUTHOR

...view details