ಹುಬ್ಬಳ್ಳಿ:ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ನಾನು ಹೆಚ್ಚು ಓಡಾಡ್ತೀದಿನಿ. ಒಡೆದು ಹೋಳಾದಂತಹ ಜೆಡಿಎಸ್ ಕೂಡಿಸೋ ಪ್ರಯತ್ನ ಮಾಡ್ತೀದಿನಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದರು. ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಇವತ್ತು ಬೇರೆ ಬೇರೆ ಪಕ್ಷದಿಂದ ಸಜ್ಜನರು ನಮ್ಮ ಪಕ್ಷ ಸೇರುತ್ತಿದ್ದಾರೆ. ಬಿಜೆಪಿಯಲ್ಲಿರುವ ಎ ಮಂಜು ಜೆಡಿಎಸ್ ಸೇರಿದ್ದಾರೆ. ಅವರೇ ಅಭ್ಯರ್ಥಿ. ಮೊದಲ ಪಟ್ಟಿಯಲ್ಲಿ ಕೆಲ ಬದಲಾವಣೆ ಆಗುತ್ತೆ. ಶೀಘ್ರದಲ್ಲೇ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು. ಹಳ್ಳಿ ಹಳ್ಳಿಗೂ ಹೆಚ್ ಡಿ ಕುಮಾರಸ್ವಾಮಿ ತಲುಪಿದ್ದಾರೆ. ನಾವು ತಂದ ಜನಕ್ಕೆ ಭಾಷಣ ಮಾಡ್ತಿಲ್ಲ, ಬಂದ ಜನಕ್ಕೆ ಭಾಷಣ ಮಾಡ್ತೀದಿವಿ. ಬೆಳಗಾವಿಯಲ್ಲೂ ಅನೇಕ ಜನ ಸೇರ್ಪಡೆ ಆಗ್ತಾರೆ. ನಮಗೆ ಹಿಂದೆ ಅಭ್ಯರ್ಥಿ ಇಲ್ಲ ಅಂದ್ರು, ಶೆಟ್ಟರ್ ಅವರು ಸ್ಪರ್ಧೆ ಮಾಡೋ ಕ್ಷೇತ್ರದಲ್ಲಿ ಆರು ಜನ ಟಿಕೆಟ್ ಕೇಳ್ತಿದಾರೆ ಎಂದು ಇಬ್ರಾಹಿಂ ತಿರುಗೇಟು ನೀಡಿದರು.
ಮಂಚದ ಮೇಲೆ ಬಿಜೆಪಿ ಸರ್ಕಾರ ತರಲಾಗಿದೆ..13 ಜನರನ್ನು ಮಂಚದ ಮೇಲೆ ಮಲಗಿಸಿ ಸರ್ಕಾರ ತರಲಾಗಿದೆ ಎಂದು ಬಿಜೆಪಿ ವಿರುದ್ಧ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು. 13 ಜನರಲ್ಲಿ 12 ಜನ ಮಂತ್ರಿ ಆಗಿದಾರೆ. ಇವತ್ತು ಜಾರಕಿಹೊಳಿ ಸಿಡಿ ತಗೊಂಡು ಕೇಂದ್ರದ ಹೋಮ್ ಮಿನಿಸ್ಟರ್ ಹತ್ರ ಹೋಗಿದ್ದಾರೆ. ಕಟೀಲ್ ಪಿಟಿಲು ಬಾರಿಸಿ ಹೇಳ್ತಾನೆ. ರೋಡ್ ಬೇಡ, ಲವ್ ಜಿಹಾದ್ ಬಗ್ಗೆ ಮಾತಾಡ್ತಾನೆ. 12 ಜನರ ಸಿಡಿನೇ ಲವ್ ಜಿಹಾದ್ ನಾ ಎಂದು ಏಕವಚನದಲ್ಲೇ ಪ್ರಶ್ನಿಸಿದರು.
ಇವತ್ತು ಜಾರಕಿಹೊಳಿ ವಿಷಕನ್ಯೆ ಬಗ್ಗೆ ಮಾತಾಡ್ತಾರೆ. ಏನ್ ಇದೆಲ್ಲ. ಬೊಮ್ಮಾಯಿ ಇಂತಹ ಪಾಪಿಗಳನ್ನು ಕಟ್ಕೊಂಡು ಮುಖ್ಯಮಂತ್ರಿ ಆಗಿದ್ದಾರೆ. ಸದಾನಂದಗೌಡ ಸೇರಿ 12 ಜನರ ಕ್ಯಾಸೆಟ್ ಹೊರಗೆ ಹಾಕಬೇಕು. ಇಲ್ಲದಿದ್ದರೆ ನೀವು ರಾಜೀನಾಮೆ ಕೊಟ್ಟು ಹೊರಗೆ ಬರಬೇಕು. ಸ್ಯಾಂಟ್ರೋ ರವಿ ಎಲ್ಲಿದ್ದಾನೆ. ಅವನ ಬಗ್ಗೆ ಸುದ್ದಿನೇ ಇಲ್ಲ. ಮಂಚ ಮುರಿಯೋದೆ ಅಚ್ಛೇ ದಿನನಾ. ಇದಕ್ಕೆ ಪ್ರಧಾನಿ ಮೋದಿ ಉತ್ತರ ಕೊಡಬೇಕು. 13 ಜನ ಬಂದು ರಾಜೀನಾಮೆ ಕೊಟ್ಟವರು ದರಿದ್ರರು. ಯಡಿಯೂರಪ್ಪ, ನಿನ್ನ ಮಗ ಮೂರು ಸಲ ಎಂಪಿ ಆಗಿದ್ದಾನೆ. ಏನಾಯ್ತು, 30 ಸಾವಿರ ಜನರಿಗೆ ಮಣ್ಣು ಹಾಕಿದ್ದೀರಿ. ಈಶ್ವರಪ್ಪಗೆ ಕ್ಲೀನ್ ಚಿಟ್ ಕೊಡಿಸಿದ್ದೀರಿ. ಅದು ಸಿಬಿಐ ತನಿಖೆಯಾಗಬೇಕು. ಬಿಜೆಪಿಯಲ್ಲಿ ದರಿದ್ರ ಗ್ರಹಗಳು ಸೇರಿಕೊಂಡಿವೆ. ನಿಮ್ಮನ್ನು ತೆಗೆದು ಹಾಕಬೇಕು ಎಂದರು.
ಜೋಶಿ ಅವರೇ ಇದೇನಾ ನವಗ್ರಹ ಪೂಜೆ. ಬನ್ನಿ ಸಂವಾದ ಮಾಡೋಣಾ. ಈದ್ಗಾ ಮೈದಾನದಲ್ಲಿ ಗಣಪತಿ ಪೂಜೆ ಕೂರಿಸಿದ್ರೆ ಅಲ್ಲ. ಜನರ ಮನಸ್ಸಲ್ಲಿ ಗಣಪತಿ ಕೂರಿಸಿ. ದರ್ಗಾ ತೆರವು ಮಾಡಿದ್ರೆ, ಏನ್ ಮಾಡಿತ್ತು ನಿಮಗೆ. ಬೈರಿದೇವರಕೊಪ್ಪ ದರ್ಗಾ ತೆರವು ಮಾಡಿದೀರಿ, ಏನ್ ಸಿಕ್ತು ನಿಮಗೆ. ಬೆಲ್ಲದ್ ಜಾಗ ಇದೆ. ಹಾಗಾಗಿ ತೆರವು ಮಾಡಿದ್ರಿ. ನಾನು ಬೊಮ್ಮಾಯಿ ಅವರಿಗೆ ಧನ್ಯವಾದ ಹೇಳ್ತೀನಿ. ಅವರು ಅಲ್ಲಿ ಹೋಗಿ ಕ್ಷಮೆ ಕೇಳಿದ್ರು.
ನಿರ್ಮಲಾ ಸೀತರಾಮನ್ ಕರ್ನಾಟಕಕ್ಕೆ ಬಂದ್ರೆ ನಕ್ಕಿದ್ದೇ ನೋಡಿಲ್ಲ. 26 ಜನ ಸಂಸದರು ಭೂಮಿಗೆ ಬಾರ ಕೂಳಿಗೆ ದಂಡ. ಬಿಜೆಪಿ ಕರ್ನಾಟಕದಲ್ಲಿ ಮೂರನೇ ಸ್ಥಾನದಲ್ಲಿದೆ. ಅದರ ನೆಕ್ಸ್ಟ್ ಕಾಂಗ್ರೆಸ್. ಕಾಂಗ್ರೆಸ್ಗೂ ಸಾಬರ್ಗೆ ಟೋಪಿ ಹಾಕಿದ್ದಾರೆ ಎಂದು ಸಿಎಂ ಇಬ್ರಾಹಿಂ ಟೀಕಿಸಿದರು.