ಧಾರವಾಡ: ಸರ್ಕಾರ ನೀಡುವ ಅಲ್ಪ ಮೊತ್ತದ ಪರಿಹಾರ ಬೇಡ ಎನ್ನಿ, ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೋಡದೇ ಹೋದ್ರೆ ನಾನೇ ನನ್ನ ಜಮೀನು ಮಾರಿ ಪರಿಹಾರ ನೀಡುವೆ ಎಂದುಧಾರವಾಡ ಶಾಸಕ ಅಮೃತ ದೇಸಾಯಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸರ್ಕಾರ ಕೊಡದಿದ್ದರೆ, ಸ್ವಂತ ಜಮೀನು ಮಾರಿ ಪರಿಹಾರ ಕೊಡುತ್ತೇನೆ: ಅಮೃತ ದೇಸಾಯಿ - ಶಾಸಕ ಅಮೃತ ದೇಸಾಯಿ
ಸರ್ಕಾರ 2, 5 ಸಾವಿರ ಪರಿಹಾರದ ಹಣ ಕೋಡೋಕೆ ಬಂದರೆ ಬೇಡ ಎನ್ನಿ. ಕೊಡುವುದಾದ್ರೆ ಸೂಕ್ತ ಪರಿಹಾರ ಕೊಡಲಿ. ಇಲ್ಲದೇ ಹೋದ್ರೆ, ನಾನೇ ನನ್ನ ಜಮೀನು ಮಾರಾಟ ಮಾಡಿ ಪರಿಹಾರ ನೀಡುವೆ ಎಂದು ಧಾರವಾಡ ಜಿಲ್ಲೆಯ ಶಾಸಕ ಅಮೃತ ದೇಸಾಯಿ ಭರವಸೆ ನೀಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಶಾಸಕ ಅಮೃತ ದೇಸಾಯಿ
ಎರಡು ದಿನಗಳಲ್ಲಿ ಪರಿಹಾರದ ಹಣ ನಿಮ್ಮ ಮನೆಗೆ ತಲುಪುತ್ತದೆ. ಯಾರೂ ಧೃತಿಗೇಡಬೇಡಿ, ನಿಮ್ಮೊಂದಿಗೆ ನಾನಿದ್ದೇನೆ ಎಂದು ಅಮೃತ ದೇಸಾಯಿ ಭರವಸೆ ನೀಡಿದ್ದಾರೆ.
ಮಳೆಯ ಪ್ರವಾಹದಿಂದ ಮನೆ ಹಾನಿಯಾದ ಪ್ರದೇಶಗಳ ವೀಕ್ಷಣೆ ನಂತರ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಮಾತನಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated : Aug 9, 2019, 10:51 AM IST