ಕರ್ನಾಟಕ

karnataka

ETV Bharat / state

ಅರವಿಂದ ಬೆಲ್ಲದ ಸಿಎಂ ಆಗ್ತಾರೆಂದು ನಾನೂ ಟಿವಿಯಲ್ಲಿ ನೋಡುತ್ತಿದ್ದೇನೆ: ಚಂದ್ರಕಾಂತ ಬೆಲ್ಲದ - ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ

ಪ್ರಧಾನಿ ಮೋದಿ ಬಗ್ಗೆ ನನಗೆ ಬಹಳ ಗೌರವ ಇದೆ. ಇವತ್ತು ಅವರು ಮಾಡುತ್ತಿರುವ ಕೆಲಸ ಎಲ್ಲ ರಾಜ್ಯದ ಜನರು ಮೆಚ್ಚಿದ್ದಾರೆ ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ತಿಳಿಸಿದ್ದಾರೆ.

Chandrakanta Bellada
ಚಂದ್ರಕಾಂತ ಬೆಲ್ಲದ

By

Published : Jul 27, 2021, 10:34 PM IST

ಧಾರವಾಡ: ಬಿಜೆಪಿ ನಾಯಕರು ಎಲ್ಲರ ಅಭಿಪ್ರಾಯ ಪಡೆದು, ಕೇಂದ್ರಕ್ಕೆ ಆ ಅಭಿಪ್ರಾಯ ಕಳುಹಿಸಲಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಅವರ ತಂದೆ ಚಂದ್ರಕಾಂತ ಬೆಲ್ಲದ ಹೇಳಿದ್ದಾರೆ.

ಈ‌ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಬಗ್ಗೆ ನನಗೆ ಬಹಳ ಗೌರವ ಇದೆ. ಇವತ್ತು ಅವರು ಮಾಡುತ್ತಿರುವ ಕೆಲಸ ಎಲ್ಲ ರಾಜ್ಯದ ಜನರು ಮೆಚ್ಚಿದ್ದಾರೆ. ಅರವಿಂದ ಬೆಲ್ಲದ ಸಿಎಂ ಆಗುತ್ತಿದ್ದಾರೆ ಎಂದು ನಾನೂ ಟಿವಿಯಲ್ಲಿ ನೋಡುತ್ತಿದ್ದೇನೆ. ನಾನು ಯಾರ ಜೊತೆಯಲ್ಲಿಯೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಯಾರ ಜೊತೆಯಲ್ಲೂ ಈ ಬಗ್ಗೆ ಮಾತನಾಡಲಿಕ್ಕೆ ಪ್ರಯತ್ನ ಪಟ್ಟಿಲ್ಲ. ನಾಲ್ಕು ದಿನಗಳಿಂದ ಇಡೀ ರಾಜ್ಯದಿಂದ ಕರೆ ಬರುತ್ತಿವೆ. ಒಳಗಿನ ವಿಷಯ ನಾನು ತಿಳಿದುಕೊಳ್ಳಲು ಹೋಗಿಲ್ಲ. ನಾನು, ಅರವಿಂದ ತಾಯಿ ಟಿವಿಯಲ್ಲಿ ನೋಡುತ್ತಿದ್ದೇವೆ. ಅಭಿಮಾನಿಗಳ ಕರೆ ಬರುತ್ತಿವೆ. ಮೀಟಿಂಗ್ ಮುಗಿದ ಮೇಲೆ ನಿರ್ಣಯ ಆಗುತ್ತೆ ಎಂದರು.

ತಂದೆಯಾದ ನನಗೆ ಸಂತೋಷ ಆಗಿದೆ. ನಿಮಗೆ ಸಂತೋಷ ಆಗಿದೆ ಎಂದರೆ ನನಗೂ ಆಗಿರುತ್ತೆ. ಎಲ್ಲರಿಗೂ ಒಳ್ಳೆಯದಾಗಲಿ. ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ABOUT THE AUTHOR

...view details