ಹುಬ್ಬಳ್ಳಿ: ಹೆಚ್.ಡಿ.ಕೆ ಹಾಗೂ ಸಿದ್ಧರಾಮಯ್ಯರವರ ಒಳಬೇಗುದಿ ಈಗ ಹೊರಬರುತ್ತಿದ್ದು, ಇದರಿಂದಾಗಿ ಮೈತ್ರಿ ಸರ್ಕಾರದಿಂದ ಹೊರಬಂದಿರುವ ಶಾಸಕರು ತೆಗೆದುಕೊಂಡ ತೀರ್ಮಾನ ಸರಿಯಾಗಿದೆ ಅಂತಾ ಅನಿಸುತ್ತೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಅನರ್ಹ ಶಾಸಕರು ತೆಗೆದುಕೊಂಡ ತೀರ್ಮಾನ ಸರಿಯಾಗಿದೆ: ಸಚಿವ ಕೆ.ಎಸ್.ಈಶ್ವರಪ್ಪ - ಸುಪ್ರೀಂ ಕೋರ್ಟ್
ಹೆಚ್.ಡಿ.ಕೆ ಹಾಗೂ ಸಿದ್ಧರಾಮಯ್ಯರವರ ಒಳಬೇಗುದಿ ಈಗ ಹೊರಬರುತ್ತಿದ್ದು, ಇದರಿಂದಾಗಿ ಮೈತ್ರಿ ಸರ್ಕಾರದಿಂದ ಹೊರಬಂದಿರುವ ಶಾಸಕರು ತೆಗೆದುಕೊಂಡ ತೀರ್ಮಾನ ಸರಿಯಾಗಿದೆ ಅಂತಾ ಅನಿಸುತ್ತೆ ಎಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ, ಮಾಜಿ ಸ್ವೀಕರ್ ಕೆ.ಆರ್.ರಮೇಶಕುಮಾರ ಅವರ ಆದೇಶಕ್ಕೆ ಹಿನ್ನೆಡೆಯಾಗಿದ್ದು, ಅವರ ತೀರ್ಪು ಅರೆಬರೆ ತೀರ್ಪಾಗಿದೆ. ಸುಪ್ರೀಂ ಕೋರ್ಟ್ ಕೂಲಂಕುಷವಾಗಿ ವಿಚಾರಣೆ ಮಾಡಿ ತೀರ್ಪು ನೀಡುವುದಾಗಿ ಹೇಳಿದೆ. ಕರ್ನಾಟಕದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಇಡೀ ದೇಶ ನೋಡುತ್ತಿದ್ದು, ಅನರ್ಹ ಶಾಸಕರಿಗೆ ನ್ಯಾಯ ಸಿಗುವುದು ಖಚಿತ, ಅಲ್ಲದೇ ಮೈತ್ರಿಯಿಂದ ಹೊರಬಂದ ಶಾಸಕರಿಗೆ ಸಿಗಬೇಕಾದ ಸ್ಥಾನಮಾನವನ್ನು ನೀಡುವುದು ನಮ್ಮ ಕರ್ತವ್ಯವಾಗಿದ್ದು, ಅದನ್ನು ನಮ್ಮ ಶಾಸಕರು ಮಾಡುವರು. ಅನರ್ಹ ಶಾಸಕರ ಸಾಂವಿಧಾನಿಕ ಬಿಕ್ಕಟ್ಟುಗಳನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಲಿದೆ. ಕೋರ್ಟ್ ಅಂತಿಮ ಆದೇಶಕ್ಕೆ ಎಲ್ಲರೂ ತಲೆಬಾಗಲೇಬೇಕು ಎಂದರು.
ಸಿದ್ದರಾಮಯ್ಯ ಅವರಿಗೆ ಈಗಾಗಲೇ ಐದು ವರ್ಷ ಅಧಿಕಾರ ನೀಡಲಾಗಿದೆ. ಆದರೆ ಅವರು ಐದು ವರ್ಷದಲ್ಲಿ ಏನೂ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ ಅವರು, ಮಾಜಿ ಸ್ವೀಕರ್ ರಮೇಶ ಕುಮಾರ ಸಿದ್ದರಾಮಯ್ಯ ಪರ ಮಾತನಾಡಿದರೆ ಉತ್ತಮ ಸ್ಥಾನ ಸಿಗುತ್ತೆ ಅನ್ನುವ ಭ್ರಮೆಯಲ್ಲಿದ್ದಾರೆ. ಈಗಾಗಲೇ ಕಾಂಗ್ರೆಸ್ನಲ್ಲಿ ಭಿನ್ನಾಭಿಪ್ರಾಯಗಳು ಸ್ಪೋಟಗೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ, ಕೆ.ಹೆಚ್.ಮುನಿಯಪ್ಪನವರ ಸೋಲಿಗೆ ರಮೇಶಕುಮಾರ ಅವರೇ ಕಾರಣ ಎಂಬ ಹೇಳಿಕೆಯೇ ಇದಕ್ಕೆ ಕಾರಣ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಸಿದ್ದರಾಮಯ್ಯ ಸೋಲು ಸೇರಿದಂತೆ ಇತ್ತೀಚೆಗೆ ಬೆಳೆವಣಿಗೆಗಳು ಅವರ ವರ್ಚಸ್ಸನ್ನು ಕಡಿಮೆ ಮಾಡಿದೆ ಎಂದರು.