ಕರ್ನಾಟಕ

karnataka

ETV Bharat / state

ಸಚಿವ ಸಂಪುಟದಿಂದ ಕೈ ಬಿಡುವ ಯಾವುದೇ ವಿಚಾರ ನನ್ನ ಗಮನಕ್ಕೆ ಬಂದಿಲ್ಲ: ಸಚಿವೆ ಶಶಿಕಲಾ ಜೊಲ್ಲೆ - Minister Shashikala Jolle news

ನನ್ನನ್ನು ಸಚಿವ ಸಂಪುಟದಿಂದ ಕೈ ಬಿಡುತ್ತಾರೆ ಎಂದು ಪಕ್ಷದಲ್ಲಿ ಯಾವುದೇ ರೀತಿ ಚರ್ಚೆಯಾಗಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Minister Shashikala Jolle
ಸಚಿವೆ ಶಶಿಕಲಾ ಜೊಲ್ಲೆ

By

Published : Nov 18, 2020, 8:53 PM IST

ಹುಬ್ಬಳ್ಳಿ: ಸಚಿವ ಸಂಪುಟದಿಂದ ಕೈ ಬಿಡುತ್ತಾರೆ ಎಂಬ ಯಾವುದೇ ಮಾಹಿತಿ ನನಗೆ ಬಂದಿಲ್ಲ. ಅಲ್ಲದೆ ಈ ಕುರಿತು ಯಾವ ವರಿಷ್ಠರು ನನ್ನೊಂದಿಗೆ ಮಾತನಾಡಿಲ್ಲ. ಇದು ಕೇವಲ ಮಾಧ್ಯಮದಲ್ಲಿ ಸೃಷ್ಟಿಯಾಗಿರುವ ವಿಷಯವಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಸಚಿವೆ ಶಶಿಕಲಾ ಜೊಲ್ಲೆ

ನಗರದಲ್ಲಿಂದು ಮಾತನಾಡಿದ ಅವರು, ನನ್ನನ್ನು ಸಚಿವ ಸಂಪುಟದಿಂದ ಕೈ ಬಿಡುತ್ತಾರೆ ಎಂದು ಪಕ್ಷದಲ್ಲಿ ಯಾವುದೇ ರೀತಿಯ ಚರ್ಚೆಯಾಗಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ರಾಷ್ಟ್ರೀಯ ಹಾಗೂ ರಾಜ್ಯದ ನಾಯಕರು ನನಗೆ ಸ್ಥಾನ ನೀಡಿದ್ದಾರೆ. ಅದನ್ನು ನಾನು ಜವಾಬ್ದಾರಿಯುತವಾಗಿ ನಿಭಾಯಿಸುತ್ತಿದ್ದೇನೆ ಎಂದರು.

ರಾಜ್ಯದ ಜನತೆಗೆ ಪ್ರಮಾಣಿಕವಾಗಿ ನಾನು ಕೆಲಸ ಮಾಡಿದ್ದೇನೆ. ನನಗೂ ಕೂಡ ವಿಶ್ವಾಸವಿದೆ. ಪಕ್ಷದ ಯಾವುದೇ ತೀರ್ಮಾನಕ್ಕೂ ನಾನು ಬದ್ಧಳಾಗಿದ್ದೇನೆ ಎಂದರು‌.

ABOUT THE AUTHOR

...view details