ಧಾರವಾಡ:ನವೀನ್ ಪಾರ್ಥಿವ ಶರೀರದ ಬಗ್ಗೆ ಅರವಿಂದ ಬೆಲ್ಲದ್ ನೀಡಿರುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯಿಸಿದ್ದು, ನಾನು ಅವರ ಹೇಳಿಕೆಯನ್ನು ಗಮನಿಸಿಲ್ಲ. ಆದರೆ ಇಂತಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ಶಬ್ದ ಬಳಸಬೇಕು ಎಂದು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷವೇ ಇರಲಿ, ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಇದೊಂದು ಕುಟುಂಬಕ್ಕೆ ಆಘಾತವಾಗಿರೋ ಸಂಗತಿಯಾಗಿದ್ದು ಯಾವ ತಪ್ಪು ಮಾಡದೇ ಆತ ಜೀವ ಕಳೆದುಕೊಂಡಿದ್ದಾನೆ.