ಹುಬ್ಬಳ್ಳಿ :ಕುಸುಮಾ ಶಿವಳ್ಳಿ ಅವರು ಗೆದ್ರೆ ನಾನು ಮೂರು ನಾಲ್ಕು ತಿಂಗಳು ಇಲ್ಲೇ ಇರುತ್ತೇನೆ. ಶಿವಳ್ಳಿಯವರು ಅವರ ಬಾಕಿ ಉಳಿಸಿದ ಕೆಲಸಗಳನ್ನ ಪೂರ್ತಿಗೊಳಿಸುತ್ತೇನೆ ಎಂದು ಕುಂದಗೋಳ ಚುನಾವಣಾ ಉಸ್ತುವಾರಿ ಡಿ.ಕೆ ಶಿವಕುಮಾರ ಹೇಳಿದರು.
ಕುಂದಗೋಳದ ಸಮಾವೇಶದಲ್ಲಿ ಮಾತನಾಡಿದ ಅವರು, ಕುಸುಮಕ್ಕನ ಜತೆ ನಿಂತುಕೊಂಡು ಶಿವಳ್ಳಿಯವರ ಎಲ್ಲ ಕನಸನ್ನ ಸಾಕಾರಗೊಳಿಸುತ್ತೇನೆ. ಶಿವಳ್ಳಿ ಯಾರಿಗೂ ತೊಂದರೆ ಕೊಡದ ಸರಳ, ಸಜ್ಜನಿಕೆಯ ರಾಜಕಾರಣಿ.ಇಲ್ಲಿ ಗೆದ್ರೆ ಯಡಿಯೂರಪ್ಪ ಸಿಎಂ ಅಂತ ಬಿಜೆಪಿ ಅವರು ಹೇಳ್ತಿದ್ದಾರೆ. ನಾವೇನೂ ಕಡ್ಲೇ ಕಾಯಿ ತಿಂತಿದ್ದೀವಾ ? ಸರ್ಕಾರ ನಡೆಸ್ತಿದ್ದೀವಿ ಎಂದು ಕಿಡಿಕಾರಿದರು.
ಕುಂದಗೋಳ ಚುನಾವಣಾ ಉಸ್ತುವಾರಿ ಡಿ.ಕೆ ಶಿವಕುಮಾರ ಮಹಾದಾಯಿ ವಿಚಾರದಲ್ಲಿ ಜಗದೀಶ ಶೆಟ್ಟರ್, ಜೋಶಿ ನಮಗೆ ಅನ್ಯಾಯ ಮಾಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ ಮೇಲೆ ರಾಜಕಾರಣ ಮಾಡ್ತಿದೆ. ರಾಜೀವ ಗಾಂಧಿ ವಿಚಾರವನ್ನು ಪ್ರಧಾನಿ ಮೋದಿ ಚುನಾವಣೆ ಸಲುವಾಗಿ ಬಳಸಿಕೊಳ್ತಿರೋದು ಬೇಸರದ ಸಂಗತಿ. 23ಕ್ಕೆ ಮೋದಿ ಸರ್ಕಾರ ಇರೋದಿಲ್ಲ, ಕಾಂಗ್ರೆಸ್ ಸರ್ಕಾರ ಇರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪನ ರಾಜಕೀಯ ದಿನಗಳು ಕೊನೆಗೊಳ್ಳುತ್ತಿವೆ. ಬಿಜೆಪಿ ಸ್ಥಳೀಯ ನಾಯಕರ ಪಾಲಿಗೆ ಕಾಂಗ್ರೆಸ್ ಬಾಗಿಲು ಯಾವತ್ತೂ ತೆಗೆದಿರುತ್ತೆ. ಅಧಿಕಾರ ಇದ್ದಾಗ ಬಿ.ಎಸ್.ಯಡಿಯೂರಪ್ಪ ಏನೂ ಮಾಡಿಲ್ಲ. ಈಗ ಏನೂ ಆಗಲ್ಲ ಎಂದರು ವ್ಯಂಗ್ಯವಾಡಿದರು.