ಹುಬ್ಬಳ್ಳಿ:ಕರ್ನಾಟಕ ರಾಜ್ಯ ಪದವೀಧರರ ಹಿತರಕ್ಷಣಾ ಸಮಿತಿಯಿಂದ ಪದವೀಧರರ ವಿವಿಧ ಕುಂದು ಕೊರತೆಗಳನ್ನು ನಿವಾರಿಸುವ ಕೆಲಸ ಮಾಡಲಾಗುತ್ತಿದೆ. ಈ ಹಿನ್ನೆಲೆ ಈ ಬಾರಿ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿ ಆಗಿದ್ದೇನೆಂದು ಸಮಿತಿಯ ಅಧ್ಯಕ್ಷ ಡಿ.ಸಿ.ರಂಗರೆಡ್ಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರರ ಹಿತ ರಕ್ಷಣಾ ಸಮಿತಿಯು ಪದವೀಧರರ ಹಿತದೃಷ್ಟಿಯಿಂದ 2013 ರಲ್ಲಿ ಸ್ಥಾಪಿಸಿ, ಕುಂದು - ಕೊರತೆಗಳನ್ನು ಈಡೇರಿಸಲು ಹೋರಾಟ ಮಾಡುತ್ತಾ ಬಂದಿದೆ. ಪ್ರತಿ ವರ್ಷ 15-20 ಸಾವಿರ ಪದವೀಧರರು ಹೊರಗಡೆ ಬರುತ್ತಿದ್ದಾರೆ. ವಿಶ್ವವಿದ್ಯಾಲಯಗಳು ನಿರುದ್ಯೋಗಿಗಳನ್ನು ಉತ್ಪಾದನೆ ಮಾಡುವ ಕಾರ್ಖಾನೆಗಳಾಗಿವೆ ಪರಿಣಾಮ ಸರಿಯಾದ ಉದ್ಯೋಗ ಅವಕಾಶಗಳು ಸಿಗದೆ ಯುವಕರು ನಿರುದ್ಯೋಗಿಗಳಾಗುವಂತಾಗಿದೆ ಎಂದರು.