ಧಾರವಾಡ: ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಬಗ್ಗೆ ಅಭಿಮಾನ ಮೂಡಿಸುವ ಹಿನ್ನೆಲೆಯಲ್ಲಿ ನಗರದಲ್ಲಿ ಶ್ರೀರಾಮಸೇನೆ 'ನಾನು ಸಾವರ್ಕರ್' ಅಭಿಯಾನವನ್ನು ಪ್ರಾರಂಭಿಸಿದೆ.
ಶ್ರೀರಾಮಸೇನೆಯಿಂದ 'ನಾನು ಸಾವರ್ಕರ್' ಅಭಿಯಾನ ಪ್ರಾರಂಭ - Dharwad
ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಮನೆಯಲ್ಲಿ ಸಾವರ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ 'ನಾನು ಸಾವರ್ಕರ್' ಅಭಿಯಾನವನ್ನು ಪ್ರಾರಂಭಿಸಲಾಯಿತು.

ನಾನು ಸಾವರ್ಕರ್ ಅಭಿಯಾನ
ಶ್ರೀರಾಮಸೇನೆಯಿಂದ ನಾನು ಸಾವರ್ಕರ್ ಅಭಿಯಾನ ಪ್ರಾರಂಭ
ನಗರದ ಸಾಧನಕೇರಿಯಲ್ಲಿರುವ ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಮನೆಯಲ್ಲಿ ಸಾವರ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ರಾಜ್ಯದಲ್ಲಿ ಲಕ್ಷಾಂತರ ಜನ 'ನಾನು ಸಾವರ್ಕರ್' ಅಭಿಯಾನಕ್ಕೆ ಕೈಜೋಡಿಸಲಿದ್ದಾರೆ. ಸ್ವಾತಂತ್ರ್ಯ ವೀರ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿರುವ ಸಾವರ್ಕರ್ ಅವರಿಗೆ ಕೆಲವರು ಅವಮಾನ ಮಾಡುತ್ತಿದ್ದಾರೆ. ಇವರಂಥ ದೇಶದ್ರೋಹಿಗಳು ಬೇರೆ ಯಾರು ಇಲ್ಲ. ಸಾವರ್ಕರ್ ಮೇಲಿನ ಅಭಿಮಾನಕ್ಕಾಗಿ ಶ್ರೀರಾಮಸೇನಾ ನಾನು ಸಾವರ್ಕರ್ ಅಭಿಯಾನ ಪ್ರಾರಂಭಿಸಿದ್ದಾಗಿ ಪ್ರಮೋದ್ ಮುತಾಲಿಕ್ ತಿಳಿಸಿದರು.