ಕರ್ನಾಟಕ

karnataka

By

Published : Jul 1, 2022, 3:03 PM IST

ETV Bharat / state

ಯಾವುದೇ ಹುದ್ದೆ, ಜವಾಬ್ದಾರಿ ಕೊಟ್ಟರೂ‌ ನಿಭಾಯಿಸಲು ಸಿದ್ದ: ಹೊರಟ್ಟಿ

ಅಧಿಕಾರ, ಪ್ರಸ್ತುತ ಶಿಕ್ಷಣ ವ್ಯವಸ್ಥೆ, ಸುಧಾರಣೆಗೆ ಸರ್ಕಾರದ ನಿರ್ಲಕ್ಷ್ಯದ ಕುರಿತಾಗಿ ಬಸವರಾಜ್‌ ಹೊರಟ್ಟಿ ವಿವರವಾಗಿ ಮಾತನಾಡಿದರು.

Former Speaker Basavaraj Horatti reaction, I am ready to handle any position Says Horatti, Former Speaker Basavaraj Horatti news, ಮಾಜಿ ಸ್ಪೀಕರ್ ಬಸವರಾಜ್ ಹೊರಟ್ಟಿ ಪ್ರತಿಕ್ರಿಯೆ, ಯಾವುದೇ ಹುದ್ದೆ ನಿಭಾಯಿಸಲು ಸಿದ್ಧ ಎಂದ ಹೊರಟ್ಟಿ, ಮಾಜಿ ಸ್ಪೀಕರ್ ಬಸವರಾಜ್ ಹೊರಟ್ಟಿ ಸುದ್ದಿ,
ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿಕೆ

ಹುಬ್ಬಳ್ಳಿ: "ನಾನು ಎಮ್​ಎಲ್​ಸಿಯಾಗಿ ಅಧಿಕಾರವನ್ನು ಕೇಳುವುದಿಲ್ಲ. ನನ್ನ ಮೇಲೆ ನಂಬಿಕೆಯಿಟ್ಟು ಯಾವುದೇ ಹುದ್ದೆ ನೀಡಿದ್ರೂ ಸಮರ್ಥವಾಗಿ ನಿಭಾಯಿಸುವೆ" ಎಂದು ಬಿಜೆಪಿ ನಾಯಕ ಹಾಗು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿಂದು ಮಾತನಾಡಿದ ಅವರು, "ನನಗೆ ಯಾವುದೇ ಹುದ್ದೆ ನೀಡಿದರೂ ಬೇಡ ಎನ್ನುವುದಿಲ್ಲ. ನನ್ನ ಆತ್ಮದ ವಿರುದ್ಧ ಎಂದಿಗೂ ನಡೆಯಲಾರೆ. ಈ ಹಿಂದಿನಂತೆಯೇ ನೇರ ನುಡಿಯಲ್ಲಿಯೇ ಮಾತನಾಡುವೆ" ಎಂದರು.


"ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಹಿಂದುಳಿದಿದೆ. ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಲು ಯಾರಿಂದಲೂ ಸಾಧ್ಯವಿಲ್ಲ. ದೇವರು ಕೆಳಗೆ ಬಂದರೂ ಅದು ಆಗದು. ಒಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗಿರುತ್ತೆ" ಎಂದು ಅಸಮಾಧಾನಗೊಂಡರು.

ಇದನ್ನೂ ಓದಿ:ಹೊರಟ್ಟಿ ಈ ಹಿಂದೆ ಸೋಲುವ ಪಕ್ಷದಲ್ಲಿದ್ದರೂ ಗೆಲ್ಲುತ್ತಿದ್ದರು: ಮುಖ್ಯಮಂತ್ರಿ ಬೊಮ್ಮಾಯಿ

"ಮಕ್ಕಳ ಕಲಿಕಾ ಮಟ್ಟ ಸುಧಾರಿಸಲು ಸರ್ಕಾರ ಎಲ್ಲ‌ ರೀತಿಯ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳ ವಿಷಯದಲ್ಲಿ ಯಾರು ಕಮರ್ಷಿಯಲ್ ಆಗಬಾರದು. ಇದೀಗ ಪಠ್ಯಪುಸ್ತಕ, ಸಮವಸ್ತ್ರ ಸರಿಯಾಗಿ ಮಕ್ಕಳಿಗೆ ತಲುಪುತ್ತಿಲ್ಲ. ಅದನ್ನು ಸರ್ಕಾರ ಮತ್ತು ಅಧಿಕಾರಿಗಳು ಕಾಲಕಾಲಕ್ಕೆ ತಲುಪಿಸುವ ಕೆಲಸ ಮಾಡಬೇಕು.

ನನ್ನ ಅಧಿಕಾರದ ಅವಧಿಯಲ್ಲಿ ಮೇ ತಿಂಗಳಲ್ಲಿಯೇ ಸೈಕಲ್, ಪುಸ್ತಕ ಕೊಡುವ ಪದ್ದತಿ ಇತ್ತು. ಆದರೆ ಕೆಲವೊಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ದೊಡ್ಡ ಮಟ್ಟದ ಸಮಸ್ಯೆ ಉದ್ಭವಿಸುತ್ತದೆ. ಶಾಲೆ ಪ್ರಾರಂಭದಲ್ಲೇ ಎಲ್ಲ ಸೌಲಭ್ಯ ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು" ಎಂದು ಬಸವರಾಜ ಹೊರಟ್ಟಿ ಸಲಹೆ ನೀಡಿದರು.

"ನಾನು ಸಭಾಪತಿಯಂತಹ ಜವಾಬ್ದಾರಿ ಸ್ಥಾನದಲ್ಲಿದ್ದಾಗ ಶಿಕ್ಷಣ ವ್ಯವಸ್ಥೆಯ ಕೆಲ ಸಮಸ್ಯೆಗಳ ಕುರಿತು ಸರ್ಕಾರಕ್ಕೆ 112 ಪತ್ರಗಳನ್ನು ಬರೆದಿದ್ದೆ. ಅದ್ಯಾವುದಕ್ಕೂ ಸರ್ಕಾರದಿಂದ ಒಂದೇ ಒಂದು ಉತ್ತರ ಬಂದಿಲ್ಲ" ಅಸಮಾಧಾನ ಹೊರಹಾಕಿದರು.

ABOUT THE AUTHOR

...view details