ಧಾರವಾಡ: ರಾಜ್ಯದಲ್ಲಿ SDPI, PFI ಬ್ಯಾನ್ ಮಾಡೋದಕ್ಕೆ ನನ್ನದು ಸಹಮತ ಇದೆ. ಕೇವಲ ಬ್ಯಾನ್ ಮಾಡಿದ್ರೆ ಮಾತ್ರ ಸಾಲದು, ಅಂತವರ ಮೇಲೆ ಕ್ರಮ ಆಗಬೇಕು. ಒಂದು ಸಂಘಟನೆ ಬ್ಯಾನ್ ಆದ್ರೆ, ಬೇರೆ ಸಂಘಟನೆ ಸೇರಿಕೊಳ್ಳುತ್ತಾರೆ. ಹೀಗಾಗಿ ಸಂಘಟನೆಗಳ ಮೇಲೆ ಕಠಿಣ ಕ್ರಮ ಆಗಬೇಕು ಎಂದು ಶಾಸಕ ಅರವಿಂದ್ ಬೆಲ್ಲದ್ ಆಗ್ರಹಿಸಿದ್ದಾರೆ.
ಮಂಗಳೂರಿನ ಪ್ರವೀಣ್ ಹತ್ಯೆ ಆಗಬಾರದು ಅದು ನೋವು ತರಿಸಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ 20 ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಅದು ಆಗಬಾರದು ಅನ್ನೋ ಕಾರಣಕ್ಕೆ ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ. ಆದರೆ ಈ ರೀತಿ ಹತ್ಯೆಯಾದಾಗ ಕಾರ್ಯಕರ್ತರಲ್ಲಿ ಬೇಸರ ಆಗೋದು ಸಹಜ. ಕೆಲ ದಿನಗಳ ಕಾಲ ಬಿಜೆಪಿ ಕಾರ್ಯಕರ್ತರಲ್ಲಿ ಈ ಬೇಸರ ಹೋಗಲ್ಲ. ಅದಕ್ಕಾಗಿಯೇ ಸಿಎಂ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.