ಹುಬ್ಬಳ್ಳಿ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಹೈಪೋಕ್ಲೋರೈಡ್ ದ್ರಾವಣ ಸಿಂಪಡಣೆ ಕಾರ್ಯ ಮುಂದುವರಿಸಲಾಗಿದೆ.
ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಹೈಪೋಕ್ಲೋರೈಡ್ ದ್ರಾವಣ ಸಿಂಪಡಣೆ.. - hubli Corona effect
ಹುಬ್ಬಳ್ಳಿ ನಗರದ ಎಲ್ಲಾ ಭಾಗಗಳಲ್ಲೂ ಮಹಾನಗರ ಪಾಲಿಕೆ ವತಿಯಿಂದ ಹೈಪೋಕ್ಲೋರೈಡ್ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ.
ಹೈಪೋ ಕ್ಲೋರೈಡ್ ದ್ರಾವಣ ಸಿಂಪಡಣೆ
ನಗರದ ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಮುಲ್ಲಾ ಓಣಿ, ಸಿಬಿಟಿ, ದುರ್ಗದಬೈಲ್, ದಾಜಿಬಾನಪೇಟೆ ಸೇರಿ ಮುಂತಾದ ಕಡೆಗಳಲ್ಲಿ ದ್ರಾವಣ ಸಿಂಪಡಣೆ ಮಾಡಲಾಯಿತು. ಹುಬ್ಬಳ್ಳಿ- ಧಾರವಾಡ ಸಂಪೂರ್ಣ ಬಂದ್ ಆಗಿದ್ದರ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ತನ್ನ ದ್ರಾವಣ ಸಿಂಪಡಣೆ ಮಾಡ್ತಿದೆ. ರಸ್ತೆಯ ಅಕ್ಕಪಕ್ಕ ಹಾಗೂ ಸ್ಲಂಗಳಲ್ಲಿ ಸಿಂಪಡಣೆ ಮಾಡಿ ವೈರಸ್ ಹರಡದಂತೆ ಕ್ರಮಕೈಗೊಳ್ಳಲಾಗುತ್ತಿದೆ.