ಹುಬ್ಬಳ್ಳಿ :ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ರಾಜಾರಾವ್ (ದೊರೈರಾಜ್) ಮಣಿಕುಂಟ್ಲಾ ಹಾಗೂ ಸುಧಾ ಮಣಿಕುಂಟ್ಲಾ ದಂಪತಿ ಸ್ಪರ್ಧಿಸಿದ್ದರು. ಪತ್ನಿ ಸುಧಾ ಸೋಲು ಕಂಡಿದ್ದು, ಪತಿ ರಾಜಾರಾವ್ 500 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ವಾರ್ಡ್ 61ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಾರಾವ್ ಸ್ಪರ್ಧಿಸಿದ್ದರು. ಅವರ ಪತ್ನಿ ಸುಧಾ ಅವರು ಪಕ್ಕದ ಮಹಿಳಾ ಮೀಸಲು ವಾರ್ಡ್ 59ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.