ಹುಬ್ಬಳ್ಳಿ: ಕಳೆದ ಹತ್ತು ವರ್ಷದ ಹಿಂದೆ ಹುಬ್ಬಳ್ಳಿಯ ಬಾದಾಮಿ ಕಾಲೋನಿ ನಿವಾಸಿ ಶಶೀಧರ್ ಗೌಡ ಎಂಬಾತ ರೂಪಾಗೌಡ ಎಂಬುವರೊಂದಿಗೆ ಮದುವೆ ಆಗಿದ್ದ. ಆದರೆ, ತವರು ಮನೆಯಿಂದ ವರದಕ್ಷಿಣೆ ತರಲಿಲ್ಲ ಎಂದು ಪತ್ನಿಗೆ ಪತಿ ಚಾಕುವಿನಿಂದ ಇರಿದಿದ್ದಾನೆ.
ವರದಕ್ಷಿಣೆ ತರದ ಪತ್ನಿಗೆ ಚಾಕುವಿನಿಂದ ಇರಿದ ಪಾಪಿ ಪತಿ.. ದುಡಿಯದೆ ತಿನ್ನೋ ದುರ್ಬುದ್ಧಿ! - ಪತ್ನಿಯ ಎದೆಯ ಭಾಗಕ್ಕೆ ಚಾಕು ಇರಿತ
ವರದಕ್ಷಿಣೆ ತೆಗೆದುಕೊಳ್ಳುವುದು ಕೊಡುವುದು ಕಾನೂನು ಪ್ರಕಾರ ಅಪರಾಧ. ಸರ್ಕಾರ, ಸಂಘ ಸಂಸ್ಥೆಗಳು ಎಷ್ಟೇ ತಿಳುವಳಿಕೆ ನೀಡಿದರೂ ವರದಕ್ಷಿಣೆ ಪಿಡುಗು ಮಾತ್ರ ಅಮಾಯಕ ಹೆಣ್ಣುಮಕ್ಕಳ ಬಲಿ ತೆಗೆದುಕೊಳ್ಳುತ್ತಿದೆ. ಇಲ್ಲೊಬ್ಬ ಪತಿ ವರದಕ್ಷಿಣೆ ಹಣಕ್ಕಾಗಿ ತನ್ನ ಪತ್ನಿಗೆ ಕಿರುಕುಳ ನೀಡಿದ್ದಾನೆ.
![ವರದಕ್ಷಿಣೆ ತರದ ಪತ್ನಿಗೆ ಚಾಕುವಿನಿಂದ ಇರಿದ ಪಾಪಿ ಪತಿ.. ದುಡಿಯದೆ ತಿನ್ನೋ ದುರ್ಬುದ್ಧಿ!](https://etvbharatimages.akamaized.net/etvbharat/prod-images/768-512-5144959-thumbnail-3x2-hbl.jpg)
ಪಾಪಿ ಪತಿ
ವರದಕ್ಷಿಣೆ ತರದ ಪತ್ನಿಗೆ ಚಾಕುವಿನಿಂದ ಇರಿತ
ಅಲ್ಲದೇ ವರದಕ್ಷಿಣೆ ತರುವಂತೆ ನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದಕ್ಕೆ ಸೊಪ್ಪು ಹಾಕದ ಕಾರಣ ಪತ್ನಿಯ ಎದೆಯ ಭಾಗಕ್ಕೆ ಚಾಕು ಇರಿದು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನಂತೆ. ನಂತರ ಒಂದು ಗಂಟೆಯ ಬಳಿಕ ಹಲ್ಲೆಗೊಳಗಾದ ರೂಪಾ ಮನೆಯಲ್ಲಿಯೇ ಇನ್ನೊಂದು ಬೀಗ ತೆಗೆದುಕೊಂಡು ತಾನೇ ಸ್ವತಃ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಅಲ್ಲದೇ ಸತತವಾಗಿ ಪಾಪಿ ಪತಿರಾಯ ಈ ರೀತಿ ಕಳೆದ 5 ಬಾರಿ ಕೊಲೆಗೆ ಯತ್ನಿಸಿದ್ದ ಎಂದು ರೂಪ ಆರೋಪಿಸಿದ್ದಾಳೆ. ಸದ್ಯ ಈ ಕುರಿತು ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿರಾಯ ನಾಪತ್ತೆ ಆಗಿದ್ದು ನನಗೆ ನ್ಯಾಯ ಕೊಡಿಸಿ ಎಂದು ರೂಪಗೌಡ ಕೇಳುತ್ತಿದ್ದಾರೆ.
Last Updated : Nov 22, 2019, 7:33 PM IST