ಹುಬ್ಬಳ್ಳಿ:ಮದುವೆಯಾಗಿ ಪತ್ನಿಯ ಜೊತೆ ಹನಿಮೂನ್ ಹೋಗಬೇಕಾದ ವ್ಯಕ್ತಿಯೊಬ್ಬ ಸ್ನೇಹಿತನೊಂದಿಗೆ ಸಹಕರಿಸು ಎಂದು ಕಿರುಕುಳ ನೀಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಗಣೇಶಪೇಟೆಯ ಮುಸ್ತಾಕ್ ಎನ್ನುವ ವ್ಯಕ್ತಿ ವಿರುದ್ದ ಆತನ ಪತ್ನಿ ದೂರು ದಾಖಲಿಸಿದ್ದಾಳೆ. 2019ರ ಜುಲೈನಲ್ಲಿ ಮುಸ್ತಾಕ್‌ಗೆ ವಿವಾಹವಾಗಿತ್ತು. ಎರಡು ದಿನ ಪತ್ನಿಯನ್ನು ಚೆನ್ನಾಗಿ ನೋಡಿಕೊಂಡ ಪತಿ, ನಂತರ ಸ್ನೇಹಿತನನ್ನು ಮನೆಗೆ ಕರೆದುಕೊಂಡು ಬಂದು, ಅವನ ಜೊತೆ ಸರಸಕ್ಕೆ ಸಹಕರಿಸಲು ಪೀಡಿಸಿದ್ದಾನೆ.
ಪತ್ನಿಯು ಪತಿಯ ಮಾತಿಗೆ ಒಪ್ಪದಿದ್ದಾಗ ಮಹಿಳಾ ಸಂಘದಲ್ಲಿ ಮಾಡಿರುವ 5 ಲಕ್ಷ ರೂಪಾಯಿ ಸಾಲ ತೀರಿಸು. ಇಲ್ಲಾ ಸ್ನೇಹಿತನ ಜೊತೆ ಸಹಕರಿಸು ಎಂದು ಹಿಂಸಿಸಿದ್ದಾನೆ. ಅಲ್ಲದೇ ತನ್ನ ಮಾತು ಕೇಳದಿದ್ದರೆ ಬೆಡ್ ರೂಂನಲ್ಲಿ ಕ್ಯಾಮಾರಾ ಇಟ್ಟು ಎಲ್ಲರಿಗೂ ವಿಡಿಯೋ ಕಳುಹಿಸುತ್ತೇನೆ ಎಂದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಸಂತ್ರಸ್ಥೆ ದೂರು ದಾಖಲಿಸಿದ್ದಾಳೆ.
ಘಟನೆಯ ಕುರಿತು ದೂರು ದಾಖಲಿಸಿಕೊಂಡಿರುವ ಮಹಿಳಾ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದು ವಿಕೃತ ಮನಸ್ಸಿನ ಪತಿರಾಯನಿಗೆ ಹುಡುಕಾಟ ನಡೆಸುತ್ತಿದ್ದಾರೆ.