ಕರ್ನಾಟಕ

karnataka

ETV Bharat / state

ಪತ್ನಿಗೆ ಕೈಕೊಟ್ಟು 7 ತಿಂಗಳ ಹಸುಗೂಸಿನ ಜೊತೆ ಗಂಡ ಪರಾರಿ: ಕಂದನಿಗಾಗಿ ಹೆಂಡತಿ ಧರಣಿ

ಪತಿ ಮಗುವಿನ ಸಮೇತ ಪರಾರಿಯಾಗಿದ್ದು, ಹೆಂಡತಿ ಮಗುವಿಗಾಗಿ ಆತನ ಮನೆ ಮುಂದೆ ಧರಣಿ ನಡೆಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಹೆತ್ತ ಕಂದಮ್ಮನಿಗಾಗಿ ಗಂಡನ ಮನೆ ಮುಂದೆ ಹೆಂಡತಿ ಧರಣಿ

By

Published : Aug 26, 2019, 4:56 PM IST

ಧಾರವಾಡ:ಪ್ರೀತಿಸಿ ಮದುವೆಯಾದ ಗಂಡ ಕೈಕೊಟ್ಟು ಮಗುವಿನ ಸಮೇತ ಪರಾರಿಯಾದ ಹಿನ್ನೆಲೆಯಲ್ಲಿ ಹೆಂಡತಿ ಗಂಡನ ಮನೆ ಎದುರು ಮಗುವಿಗಾಗಿ ಧರಣಿ ನಡೆಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಸರಸ್ವತಪುರ ನಿವಾಸಿ ಝಯೀನ್ ಅಡ್ಡೆವಾಲೆ ಎಂಬ ವ್ಯಕ್ತಿ ರಬಿಯಾ ಎಂಬ ಯುವತಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡು ಇದೀಗ ಪತ್ನಿಗೆ ಕೈಕೊಟ್ಟು ಏಳು ತಿಂಗಳ ಮಗುವಿನೊಂದಿಗೆ ಪರಾರಿಯಾಗಿದ್ದಾನೆ. ಎಂದು ಪತ್ನಿ ರಬಿಯಾ ಆರೋಪಿಸಿದ್ದಾರೆ. ಮಗು ನಮಗೆ ಸಿಗುವವರೆಗೂ ಧರಣಿ ಮುಂದುವರೆಸುತ್ತೇವೆ ಎಂದು ಪತ್ನಿ ತಮ್ಮ ಕುಟುಂಬಸ್ಥರೊಂದಿಗೆ ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ.

ಹೆತ್ತ ಕಂದಮ್ಮನಿಗಾಗಿ ಗಂಡನ ಮನೆ ಮುಂದೆ ಹೆಂಡತಿ ಧರಣಿ

ಈಕೆ ಹೈದರಾಬಾದ್​​ನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಝಯೀನ್​​​ನನ್ನು ಪ್ರೀತಿಸಿ ಮದುವೆಯಾಗಿದ್ದರಂತೆ. ಇದೀಗ ಹೆಂಡತಿಯನ್ನು ಬಿಟ್ಟು ಮಗುವಿನೊಂದಿಗೆ ಝಯೀನ್ ಅಡ್ಡೆವಾಲೆ ಪರಾರಿಯಾಗಿದ್ದಾನೆ‌. ಮಗುವನ್ನು ತಮಗೆ ಮರಳಿ‌ ಕೊಡಿಸುವಂತೆ ಪತ್ನಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details