ಕರ್ನಾಟಕ

karnataka

ETV Bharat / state

ಮದ್ಯದ ಅಮಲು: ಧಾರವಾಡದಲ್ಲಿ ಹೆಂಡತಿಯ ಮೂಗನ್ನೇ ಕಚ್ಚಿದ ಭೂಪ! - ಪತಿ ಪತ್ನಿ ಗಲಾಟೆ

ಮದ್ಯದ ಅಮಲಿನಲ್ಲಿದ್ದ ವ್ಯಕ್ತಿವೋರ್ವ ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಪತ್ನಿಯ ಮೂಗನ್ನು ಬಾಯಿಂದ ಕತ್ತರಿಸಿದ್ದಾನೆ. ಧಾರವಾಡದಲ್ಲಿ ಈ ಪ್ರಕರಣ ನಡೆದಿದೆ.

Husband cuts wife nose in Dharwad
ಪತಿಯಿಂದ ಹಲ್ಲೆಗೊಳಗಾದ ಮಹಿಳೆ ಗೀತಾ

By

Published : Jul 11, 2021, 10:53 AM IST

Updated : Jul 11, 2021, 11:21 AM IST

ಧಾರವಾಡ : ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿ ವ್ಯಕ್ತಿವೋರ್ವ ತನ್ನ ಪತ್ನಿಯ ಮೂಗು ಕಚ್ಚಿ ಪರಾರಿಯಾಗಿರುವ ಘಟನೆ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ.

ಉಮೇಶ್ ಎಂಬಾತ ತನ್ನ ಹೆಂಡತಿ ಗೀತಾ ಮೇಲೆ ಹಲ್ಲೆ ಮಾಡಿದ್ದಾನೆ. ದಂಪತಿ ನಡುವೆ ಪದೇಪದೆ ಜಗಳ ನಡೆಯುತ್ತಿತ್ತು. ಹಾಗಾಗಿ, ಗೀತಾ ತವರು ಮನೆ ಸೇರಿದ್ದಳು. ಅಲ್ಲಿಗೆ ಹೋದ ಉಮೇಶ್, ಕುಡಿದ ಮತ್ತಿನಲ್ಲಿ ಪತ್ನಿಯೊಂದಿಗೆ ಗಲಾಟೆ ಮಾಡಿ ಆಕೆಯ ಮೂಗನ್ನು ಕಚ್ಚಿದ್ದಾನೆ.

ಪತಿಯಿಂದ ಹಲ್ಲೆಗೊಳಗಾದ ಮಹಿಳೆ ಗೀತಾ

ಓದಿ : ವೀಕೆಂಡ್​ ಮೋಜು-ಮಸ್ತಿ.. ಕುಡಿದು ಕಾರು ಚಲಾಯಿಸಿ ಕಂಬಕ್ಕೆ ಡಿಕ್ಕಿ ಹೊಡೆದ!

ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದಲ್ಲದೆ, ತನ್ನ ಅತ್ತೆಯ ಕತ್ತು ಹಿಸುಕಿ ಆಕೆಯ ಮೇಲೂ ಹಲ್ಲೆ ಮಾಡಿ ಉಮೇಶ್ ಪರಾರಿಯಾಗಿದ್ದಾನೆ. ಸದ್ಯ, ಹಲ್ಲೆಗೊಳಗಾದ ಗೀತಾ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Last Updated : Jul 11, 2021, 11:21 AM IST

ABOUT THE AUTHOR

...view details