ಕರ್ನಾಟಕ

karnataka

ETV Bharat / state

ಹೊಲದಲ್ಲಿ ಪತ್ನಿ ಕೊಚ್ಚಿ ಕೊಲೆ ಮಾಡಿ ನೇಣು ಹಾಕಿಕೊಂಡ ಪತಿ - ಹೆಂಡತಿಯನ್ನು ಕೊಲೆ ಮಾಡಿದ ಪತಿ

ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಹೊಲದಲ್ಲಿ ಪತಿಯೊಬ್ಬ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ, ನಂತರ ತಾನು ಸಹ ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

husband-commits-suicide-after-he-kills-his-wife-in-dharwad
ಹೊಲದಲ್ಲಿ ಪತ್ನಿಯನ್ನು ಕೊಚ್ಚಿ ಕೊಲೆಗೈದು ನೇಣು ಹಾಕಿಕೊಂಡ ಪತಿ

By

Published : Oct 11, 2022, 9:47 PM IST

ಧಾರವಾಡ: ಹೆಂಡತಿಯನ್ನು ಕೊಲೆ ಮಾಡಿದ ಪತಿಯೋರ್ವ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ನಡೆದಿದೆ.

ಶ್ರೀದೇವಿ ರಾಮಾಪುರ ಎಂಬುವವರೇ ಪತಿಯಿಂದ ಕೊಲೆಯಾದವರು. ರಾಜು ರಾಮಾಪುರ ಎಂಬಾತನೇ ಪತ್ನಿಯೊಂದು ಸಾವಿಗೆ ಶರಣಾದ ಪತಿ‌. ಪತ್ನಿ ಪತ್ನಿ ಶ್ರೀದೇವಿಯನ್ನು ಹೊಲದಲ್ಲೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಪತ್ನಿಯ ಕೊಲೆ ಮಾಡಿದ ಬಳಿಕ ತಾನು ಸಹ ಹೊಲದಲ್ಲೇ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ 90ರ ಅರ್ಚಕ.. ದೇವಸ್ಥಾನ ಸಮಿತಿ ಮೇಲೆ ಚಿತ್ರಹಿಂಸೆ ಆರೋಪ

ABOUT THE AUTHOR

...view details