ಕರ್ನಾಟಕ

karnataka

ETV Bharat / state

ಮಗುವಿಗೆ ಹಾಲುಣಿಸುವಾಗ ಪತ್ನಿ ಎದೆಗೆ ಬ್ಲೇಡ್​ನಿಂದ ಕೊಯ್ದ ಪತಿ.. ಅಯ್ಯೋ ರಾಕ್ಷಸ ನಿನಗೇನಾಗಿತ್ತೋ..

ಇದರಿಂದ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಕಿಮ್ಸ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಮಗುವಿಗೆ ಬ್ಲೇಡ್ ತಾಗಿಲ್ಲ. ಈ‌ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Husband attack on wife in Hubli
ಮಗುವಿಗೆ ಹಾಲುಣಿಸುತ್ತಿರುವಾಗ ತಾಯಿಯ ಎದೆ ಭಾಗಕ್ಕೆ ಬ್ಲೇಡ್​ನಿಂದ ಹಲ್ಲೆ

By

Published : Feb 26, 2021, 1:33 PM IST

ಹುಬ್ಬಳ್ಳಿ :ಮಗುವಿಗೆ ಹಾಲುಣಿಸುತ್ತಿರುವಾಗ ಪಾಪಿ ಪತಿಯೋರ್ವ ಪತ್ನಿ ಮೇಲೆ ಬ್ಲೇಡ್​ನಿಂದ ಹಲ್ಲೆ ಮಾಡಿದ ಘಟನೆ ಗಂಗಾಧರ್ ನಗರದಲ್ಲಿ ನಡೆದಿದೆ.

ಪತಿ ಸುನಿಲ್ ತನ್ನ ಪತ್ನಿಯ ಎದೆ ಭಾಗಕ್ಕೆ ಬ್ಲೇಡ್​ನಿಂದ ಹಲ್ಲೆ ಮಾಡಿದ್ದಾನೆ. ನಿತ್ಯ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಆದರೆ, ಇಂದು ಬೆಳಗ್ಗೆ ಪತಿ-ಪತ್ನಿಯ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ. ಮಗುವಿಗೆ ಹಾಲುಣಿಸುತ್ತಿದ್ದ ಪತ್ನಿಯ ಎದೆ ಭಾಗಕ್ಕೆ ಪತಿ ಬ್ಲೇಡ್​ನಿಂದ ಹಲ್ಲೆ ಮಾಡಿದ್ದಾನೆ.

ಮಗುವಿಗೆ ಹಾಲುಣಿಸುತ್ತಿರುವಾಗ ತಾಯಿಯ ಎದೆ ಭಾಗಕ್ಕೆ ಬ್ಲೇಡ್​ನಿಂದ ಹಲ್ಲೆ

ಇದರಿಂದ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಕಿಮ್ಸ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಮಗುವಿಗೆ ಬ್ಲೇಡ್ ತಾಗಿಲ್ಲ. ಈ‌ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details