ಕರ್ನಾಟಕ

karnataka

ETV Bharat / state

ಸಿಎ ಸೈಟ್ ವಾಪಸ್ ಪಡೆಯಲು ನೋಟಿಸ್: ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ - The HUDA chairman said that it will take back the HUDA sites in Hubballi and Dharwad

ಸಿಎ ನಿವೇಶನದಲ್ಲಿ ನಿಯಮವನ್ನು ಉಲ್ಲಂಘಿಸಿ ಕೆಲವೆಡೆ ಮನೆಗಳನ್ನು ನಿರ್ಮಿಸಿರುವುದು, ವಾಣಿಜ್ಯ ಮಳಿಗೆ ಕಟ್ಟಿರುವುದು, ಫಾರ್ಮ ಹೌಸ್ ಮಾಡಿರುವುದು, ಹಾಗೆ ಖಾಲಿ ಬಿಟ್ಟಿರುವುದು ಹುಡಾ ಗಮನಕ್ಕೆ ಬಂದಿದೆ.

huda-issues-notice-to-take-back-ca-site-in-hubballi-and-dharwad
ಸಿಎ ಸೈಟ್ ವಾಪಸ್ ಪಡೆಯಲು ನೋಟಿಸ್ : ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ

By

Published : Jul 12, 2022, 8:38 PM IST

ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ನಾಗರಿಕ ಸೌಕರ್ಯ ನಿವೇಶನ ಪಡೆದ ಸಂಘ ಸಂಸ್ಥೆಗಳು, ಅವುಗಳನ್ನು ಸದುಪಯೋಗ ಮಾಡಿಕೊಳ್ಳದೆ ಇರುವುದು ಹಾಗೂ ಬೇರೆ ಬೇರೆ ಉದ್ದೇಶಕ್ಕೆ ಬಳಕೆ ಮಾಡಿರುವುದು ಬೆಳಕಿಗೆ ಬಂದಿವೆ. ಈಗಾಗಲೇ 359 ಸಿಎ ಸೈಟ್​​ಗಳನ್ನು ಹುಡಾ ನೀಡಿದ್ದು, ಅದರಲ್ಲಿ ಕನಿಷ್ಠ 200ಕ್ಕಿಂತ ಹೆಚ್ಚು ಸೈಟುಗಳನ್ನು ಸರಿಯಾಗಿ ಬಳಕೆಯಾಗಿಲ್ಲ ಎಂದು ಸರ್ವೆಯಲ್ಲಿ ಅಂದಾಜಿಸಲಾಗಿದೆ. ಬಳಕೆಯಾಗದೇ ಇರುವ ಸೈಟ್ ಗಳನ್ನು ಹುಡಾ ಮರಳಿ ಪಡೆಯಲಿದೆ ಎಂದು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ತಿಳಿಸಿದ್ದಾರೆ.

ಯಾವುದೇ ಲೇಔಟ್ ನಿರ್ಮಾಣ ಮಾಡಬೇಕಾದಲ್ಲಿ ಸಿಎ ಸೈಟಿಗಾಗಿ ಜಾಗವನ್ನು ಮೀಸಲಿಡಬೇಕು ಎನ್ನುವುದು ನಿಯಮ. ಅಂತಹ ಸಿಎ ಸೈಟನ್ನು ನಾಗರಿಕ ಮೂಲ ಸೌಕರ್ಯದ ಸಲುವಾಗಿ ಕಾಲಕಾಲಕ್ಕೆ ಅರ್ಜಿ ಕರೆದು ಹಂಚಿಕೆ ಮಾಡಲಾಗುತ್ತದೆ. ಈ ಜಾಗದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮುದಾಯ ಭವನ, ಆಸ್ಪತ್ರೆ, ಶೈಕ್ಷಣಿಕ, ಸಾಂಸ್ಕೃತಿಕ ಭವನ, ಧಾರ್ಮಿಕ, ಶಿಶುಪಾಲನೆ, ಕ್ರೀಡಾ ಚಟುವಟಿಕೆ, ವ್ಯಾಯಾಮ ಶಾಲೆ, ನ್ಯಾಯಬೆಲೆ ಅಂಗಡಿ, ಹಣ್ಣಿನ ಅಂಗಡಿ, ತರಕಾರಿ ಮಳಿಗೆ ಇತ್ಯಾದಿ ಸಾಮಾಜಿಕ ಕಾರ್ಯಗಳಿಗೆ ಅರ್ಜಿ ಕರೆದು ಸಿಎ ಸೈಟ್​​ನ್ನು ಹುಡಾ ನೀಡಿರುತ್ತದೆ. ಸಿಎ ಸೈಟಿನಲ್ಲಿ ಸ್ವಂತ ಉದ್ಯೋಗ, ವಾಣಿಜ್ಯ ಚಟುವಟಿಕೆ ಅಥವಾ ಮನೆ ನಿರ್ಮಾಣಕ್ಕಾಗಿ ಅವಕಾಶ ಇರುವುದಿಲ್ಲ.

ಈ ಸಿಎ ನಿವೇಶನದಲ್ಲಿ ನಿಯಮವನ್ನು ಉಲ್ಲಂಘಿಸಿ ಕೆಲವೆಡೆ ಮನೆಗಳನ್ನು ನಿರ್ಮಿಸಿರುವುದು, ವಾಣಿಜ್ಯ ಮಳಿಗೆ ಕಟ್ಟಿರುವುದು, ಫಾರ್ಮ ಹೌಸ್ ಮಾಡಿರುವುದು, ಹಾಗೆ ಖಾಲಿ ಬಿಟ್ಟಿರುವುದು ಹುಡಾ ಗಮನಕ್ಕೆ ಬಂದಿದೆ. ಸ್ಥಳೀಯ ಲೇಔಟ್​​ನಲ್ಲಿರುವ ನಿವೇಶನ ಮಾಲೀಕರು ಸಹ ಪ್ರಾಧಿಕಾರಕ್ಕೆ ಬಂದು ದೂರು ನೀಡಿದ್ದರಿಂದ ನೀಡಿರುವ ಸೈಟನ್ನು ವಾಪಸ್ಸು ಪಡೆಯಲು ಮುಂದಾಗಿದೆ. ಈಗಾಗಲೇ 200 ಕ್ಕಿಂತ ಹೆಚ್ಚು ಸಿಎ ಸೈಟ್​​ಗಳನ್ನು ಗುರುತಿಸಲಾಗಿದೆ. ದುರುಪಯೋಗವಾಗಿರುವ 40 ಸೈಟ್​ಗಳಿಗೆ ನೋಟಿಸ್ ನೀಡಲಾಗಿದೆ. ಒಂದು ತಿಂಗಳಲ್ಲಿ ಪರಿಶೀಲಿಸಿ, ನೋಟಿಸನ್ನು ನೀಡಿದ ಸಿಎ ಸೈಟನ್ನು ರದ್ದುಪಡಿಸಿ ಪುನಃ ಸಿಎ ಸೈಟ್​​ಗೆ ಅರ್ಜಿ ಕರೆಯಲಾಗುವುದು. ಇದರಿಂದ ಹುಡಾಕ್ಕೆ ರೂ.125 ಕೋಟಿ ಆದಾಯ ಸಿಗಲಿದೆ ಎಂದು ನಾಗೇಶ್ ಕಲಬುರ್ಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಓದಿ :ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸರ್ಕಾರ ದಲಿತರನ್ನ ಅನಾಥ ಶಿಶುಗಳನ್ನಾಗಿಸಿದೆ: ಧ್ರುವ ನಾರಾಯಣ್

For All Latest Updates

TAGGED:

ABOUT THE AUTHOR

...view details