ಹುಬ್ಬಳ್ಳಿ: ಕೊರೊನಾ ವೈರಸ್ ಶಂಕೆ ಹಿನ್ನೆಲೆ ತಮ್ಮಲ್ಲಿ ದಾಖಲಾಗಿದ್ದ ಇಬ್ಬರು ಶಂಕಿತರಲ್ಲೂ ವೈರಸ್ ಕಂಡು ಬಂದಿಲ್ಲ. ಹಾಗಾಗಿ ಅವರಿಬ್ಬರನ್ನೂ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರದಾನಿ ತಿಳಿಸಿದ್ದಾರೆ.
ಇಬ್ಬರು ಕೊರೊನಾ ವೈರಸ್ ಶಂಕಿತರ ಬಗ್ಗೆ ಹುಬ್ಬಳ್ಳಿ ಕಿಮ್ಸ್ ಡೈರೆಕ್ಟರ್ ಹೀಗಂತಾರೆ.. - ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ
ಕೊರೊನಾ ವೈರಸ್ ಶಂಕೆ ಹಿನ್ನೆಲೆ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರದಾನಿ ತಿಳಿಸಿದ್ದಾರೆ.

ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್
ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್
ಕೊರೊನಾ ವೈರಸ್ ಶಂಕೆ ಹಿನ್ನೆಲೆಯಲ್ಲಿ ಕಿಮ್ಸ್ಗೆ ಒಬ್ಬ ರೋಗಿ ದಾಖಲಾಗಿದ್ದರು. ಕೆಲ ದಿನಗಳ ಹಿಂದೆ ಬೀಜಿಂಗ್ನಿಂದ ವಾಪಸ್ ಆದ ದಾಂಡೇಲಿ ಮೂಲದ ಮತ್ತೊಬ್ಬರು ಜ್ವರದಿಂದ ಬಳಲುತ್ತಿದ್ದರು. ಹಾಗಾಗಿ ನಿನ್ನೆ ಕಿಮ್ಸ್ಗೆ ಅವರನ್ನು ದಾಖಲಿಸಲಾಗಿತ್ತು.
ಕೊರೊನಾ ವೈರಸ್ ಶಂಕೆ ಇರುವುದರಿಂದ ವಿಶೇಷ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಶಂಕಿತ ಕೊರೊನಾ ವೈರಸ್ ಕಂಡು ಬಂದಿಲ್ಲ. ಹಾಗಾಗಿ ನಿನ್ನೆ ಸಾಯಂಕಾಲ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರದಾನಿ ಸ್ಪಷ್ಟಪಡಿಸಿದ್ದಾರೆ.
Last Updated : Feb 7, 2020, 2:26 PM IST