ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರ ಕಮಿಷನರೇಟ್ ಪೊಲೀಸರಿಗೆ ಟ್ರಾಫಿಕ್ ನಿರ್ವಹಣೆಯೇ ದೊಡ್ಡ ತಲೆನೋವಾಗಿದೆ. ಕ್ರೈಂ ಪ್ರಕರಣಗಳನ್ನು ಬೇಧಿಸುವುದಕ್ಕಿಂತ ಟ್ರಾಫಿಕ್ ನಿರ್ವಹಣೆ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ ಎನ್ನಲಾಗಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯನ್ನು ಸ್ಮಾರ್ಟ್ ಮಾಡಲು ಬಂದಿರುವ ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಫ್ಲೈಓವರ್ ಕಾಮಗಾರಿಯಿಂದ ದಿನಕ್ಕೊಂದು ಮಾರ್ಗ ಬದಲಾವಣೆ ಹಿನ್ನೆಲೆ ಪೊಲೀಸರಿಗೆ ಟ್ರಾಫಿಕ್ ನಿರ್ವಹಣೆ ಮಾಡುವುದೇ ದೊಡ್ಡ ತಲೆನೋವಾಗಿದೆ. ಕಿಕ್ಕಿರಿದ ರಸ್ತೆಗಳ ಮಧ್ಯೆ ವಾಹನ ಸವಾರರು ಪರದಾಡುತ್ತಿದ್ದು, ಇದನ್ನು ನಿರ್ವಹಿಸುವ ಜವಾಬ್ದಾರಿ ಪೊಲೀಸರದ್ದಾಗಿದೆ.
ಒಂದು ದಿನ ಗೋಕುಲ ರೋಡ್ ಕಾಮಗಾರಿ ಆರಂಭವಿದ್ದರೆ ಮತ್ತೊಂದು ದಿನ ಕಾಮಗಾರಿ ನಿಲ್ಲಿಸಲಾಗಿರುತ್ತದೆ. ಅಲ್ಲದೇ ಕೆಲವು ದಿನ ಐಟಿ ಪಾರ್ಕ್ ಮುಂದಿನ ರಸ್ತೆಯಲ್ಲಿ ಕಾಮಗಾರಿ ಆರಂಭವಾಗಿದ್ರೆ, ಕೆಲವು ದಿನ ಬಂದ್ ಆಗಿರುತ್ತದೆ. ಇದರಿಂದ ಜನ ಸಾಮಾನ್ಯರು ಸಹ ಮಾರ್ಗ ಬದಲಾವಣೆ ಗೊಂದಲಕ್ಕೆ ಸಿಲುಕಿ ಪರದಾಡುವಂತಾಗಿದೆ.