ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಿಂದ ಗದಗ, ಹೊಸಪೇಟೆ, ಬಾಗಲಕೋಟೆ, ವಿಜಯಪುರಕ್ಕೆ ವೋಲ್ವೊ ಎಸಿ ಬಸ್ ಸಂಚಾರ ಶೀಘ್ರ ಆರಂಭ - ಹುಬ್ಬಳ್ಳಿ ಟುಡೆ ನ್ಯೂಸ್

ಹುಬ್ಬಳ್ಳಿಯಿಂದ ಪ್ರಮುಖ ಜಿಲ್ಲಾ ಕೇಂದ್ರಗಳಿಗೆ ವೋಲ್ವೊ ಎಸಿ ಬಸ್ ಸಂಚಾರವನ್ನು ಶೀಘ್ರದಲ್ಲಿ ಆರಂಭವಾಗಲಿದೆ. ಈ ಕುರಿತಂತೆ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ..

volvo ac bus will start shortly from hubli
ಹುಬ್ಬಳ್ಳಿಯಿಂದ ವೋಲ್ವೊ ಎಸಿ ಬಸ್ ಸಂಚಾರ ಶೀಘ್ರ ಆರಂಭ

By

Published : Dec 19, 2021, 8:51 PM IST

ಹುಬ್ಬಳ್ಳಿ:ಸಾರ್ವಜನಿಕರಿಗೆ ಮತ್ತಷ್ಟು ಶೀಘ್ರ ಹಾಗೂ ಆರಾಮದಾಯಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನಗರದಿಂದ ಪ್ರಮುಖ ಜಿಲ್ಲಾ ಕೇಂದ್ರಗಳಿಗೆ ವೋಲ್ವೊ ಎಸಿ ಬಸ್ ಸಂಚಾರವನ್ನು ಶೀಘ್ರದಲ್ಲಿ ಆರಂಭಿಸಲಾಗುತ್ತದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದರು.

ಹುಬ್ಬಳ್ಳಿ-ಬೆಳಗಾವಿ ಹಾಗೂ ಹುಬ್ಬಳ್ಳಿ-ದಾವಣಗೆರೆ ನಡುವೆ ವೋಲ್ವೋ ಎಸಿ ಬಸ್ ಸಂಚಾರ ಆರಂಭಿಸಲಾಗಿದೆ. ಈ ಬಸ್​​​​ಗಳು ಮಾರ್ಗ ಮಧ್ಯದ ಪ್ರಮುಖ ಊರುಗಳಲ್ಲಿ ಮಾತ್ರ ನಿಲುಗಡೆ ನೀಡಿ ಬೈಪಾಸ್ ಮೂಲಕ ಸಂಚರಿಸುತ್ತವೆ.

ಇದರಿಂದ ಪ್ರಯಾಣದ ಅವಧಿಯಲ್ಲಿ ಸಾಕಷ್ಟು ಉಳಿತಾಯವಾಗುತ್ತದೆ. ಖಾಸಗಿ ಸ್ವಂತ ವಾಹನ ಪ್ರಯಾಣಕ್ಕೆ ಹೋಲಿಸಿದಾಗ ಆರಾಮದಾಯಕ ಹಾಗೂ ಮಿತವ್ಯಕರವಾಗಿದೆ. ಹುಬ್ಬಳ್ಳಿಯಿಂದ ಇತರೆ ಪ್ರಮುಖ ಜಿಲ್ಲಾ ಕೇಂದ್ರಗಳಿಗೂ ವೋಲ್ವೊ ಬಸ್ ಸೌಲಭ್ಯ ಕಲ್ಪಿಸುವಂತೆ ಬೇಡಿಕೆ ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಗದಗ-ಹೊಸಪೇಟೆ, ಗದಗ-ಹುಬ್ಬಳ್ಳಿ-ಬೆಳಗಾವಿ, ಹುಬ್ಬಳ್ಳಿ-ಬಾಗಲಕೋಟೆ, ಹುಬ್ಬಳ್ಳಿ-ವಿಜಯಪುರ ಮಾರ್ಗಗಳಲ್ಲಿ ವೋಲ್ವೊ ಎಸಿ ಬಸ್ ಸಂಚಾರ ಆರಂಭಿಸಲು ಯೋಜಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲಕರ ವೇಳಾಪಟ್ಟಿ ಹಾಗೂ ಪ್ರೋತ್ಸಾಹಕ ಪ್ರಯಾಣ ದರ ನಿಗದಿಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details