ಹುಬ್ಬಳ್ಳಿ:ವಾಣಿಜ್ಯನಗರಿ ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ವಿಮಾನ ಹಾಗೂ ಅತಿ ವೇಗದ ಸ್ಪೋರ್ಟ್ಸ್ ಕಾರುಗಳನ್ನು ತಯಾರಿಸುವ ಮೂಲಕ ಸೀ ಇಂಡಿಯಾ ರಾಷ್ಟ್ರೀಯ ಮಟ್ಟದ ಕಾಂಪಿಟೇಶನ್ನಲ್ಲಿ ಮೊದಲ ಸ್ಥಾನ ಪಡೆದುಕೊಂಡು ಹುಬ್ಬಳ್ಳಿ ಹಿರಿಮೆ ಹೆಚ್ಚಿಸಿದ್ದಾರೆ.
ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ವಿಭಾಗದ ಎರಡು ಪ್ರತ್ಯೇಕ ತಂಡಗಳು ಅತಿ ವೇಗದ ಕಾರು ಹಾಗೂ 7.5 ಭಾರವನ್ನು ಹೊತ್ತು ಮೇಲಕ್ಕೆ ಹಾರುವ ಸಾಮರ್ಥ್ಯ ಹೊಂದಿರುವ ವಿಮಾನ ತಯಾರಿಸಿದ್ದಾರೆ. ಸದ್ಯ ಈ ವಿದ್ಯಾರ್ಥಿಗಳು ತಯಾರಿಸಿರುವ ಕಾರು ಹಾಗೂ ವಿಮಾನವನ್ನು ಗೇಟರ್ ನೋಯ್ಡಾದಲ್ಲಿ ನಡೆದ ಸೀ ಇಂಡಿಯಾ ಕಾಂಪಿಟೇಶನ್ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿಕೊಂಡಿದ್ದಾರೆ.
ವಿಮಾನ ತಯಾರಿಸಿ ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ ಒಂದು ಲಕ್ಷ ಹಾಗೂ ಕಾರು ತಯಾರಿಸಿ ಪ್ರಥಮ ಸ್ಥಾನ ಗಳಿಸಿರುವ ತಂಡಕ್ಕೆ ಎರಡು ಲಕ್ಷ ಬಹುಮಾನ ನೀಡಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿಯಿಂದ ಪ್ರಶಂಸೆ ವ್ಯಕ್ತವಾಗಿದೆ.