ಹುಬ್ಬಳ್ಳಿ:ಇಡೀ ದೇಶವೇ ಕೊರೊನಾ ಹೊಡೆತಕ್ಕೆ ನಲುಗಿದ್ದು, ಈವರೆಗೆ ಔಷಧ ಕೂಡ ದೊರೆಯದೇ ಪರಿತಪಿಸುವಂತಾಗಿದೆ . ಈ ಹಿನ್ನೆಲೆ, ಕೊರೊನಾ ವೈರಸ್ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳೇ ಮುಖ್ಯವಾಗಿದ್ದು, ನಗರದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸಾರ್ವಜನಿಕರ ಅನುಕೂಲಕ್ಕಾಗಿ ಕಡಿಮೆ ಬೆಲೆಯಲ್ಲಿ ಸ್ಯಾನಿಟೈಸರ್ ಉಪಕರಣವನ್ನು ಕಂಡು ಹಿಡಿದಿದ್ದಾರೆ.
ಹೋಮ್ ಸ್ಯಾನಿಟೈಸರ್ ಉಪಕರಣ ಕಂಡು ಹಿಡಿದ ಹುಬ್ಬಳ್ಳಿಯ ವಿದ್ಯಾರ್ಥಿ!
ಕೊರೊನಾ ವೈರಸ್ಗೆ ಲಸಿಕೆ ಲಭ್ಯವಾಗಿಲ್ಲವಾದರೂ, ಕೆಲ ಮುಂಜಾಗೃತ ಕ್ರಮಗಳು ನಮ್ಮನ್ನು ರಕ್ಷಿಸಲಿವೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ವಿದ್ಯಾರ್ಥಿಯೊಬ್ಬ ಹೋಂ ಸ್ಯಾನಿಟೈಸರ್ ಒಂದನ್ನು ಕಂಡು ಹಿಡಿದಿದ್ದಾನೆ.
ಹುಬ್ಬಳ್ಳಿ ಈಶ್ವರನಗರದ ನಿವಾಸಿ ಕಿರಣ ಗಂಗಾವತಿ ಎಂಬುವವರು ಈ ಉಪಕರಣ ಕಂಡು ಹಿಡಿದವರಾಗಿದ್ದಾರೆ. ಇವರು ಜನರ ಆರೋಗ್ಯದ ದೃಷ್ಟಿಯಿಂದ ಈ ಯಂತ್ರವನ್ನು ತಯಾರು ಮಾಡಿದ್ದು, ಮನೆಯಿಂದ ಹೊರಗಡೆ ಹೋಗುವ ಜನರು ಪದೇ ಪದೆ ಸ್ಯಾನಿಟೈಸರ್ ಬಳಸುವುದು ಕಷ್ಟ, ಅಲ್ಲದೇ ಈ ಸ್ಯಾನಿಟೈಸರ್ಗಳನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡುವುದು ಕಷ್ಟ ಎಂಬುದನ್ನ ಅರಿತ ಕಿರಣ, ಮನೆಗೆ ಬರುವ ಮುನ್ನ ಕಡ್ಡಾಯವಾಗಿ ಕೈಗೆ ಸ್ಯಾನಿಟೈಸರ್ ಬಳಕೆ ಮಾಡಿಕೊಂಡೇ ಬರಬೇಕು ಎಂಬ ಉದ್ದೇಶದಿಂದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಬಳಸಿ ಸ್ಯಾನಿಟೈಸರ್ ಉಪಕರಣವನ್ನು ತಯಾರಿಸಿದ್ದಾರೆ.
ಇನ್ನು ಈ ಉಪಕರಣವನ್ನು ಮನೆ ಬಾಗಿಲಿಗೆ ಹಾಕಿದರೆ ಸಾಕು ಮನೆಯಿಂದ ಹೊರ ಹೋಗಿ ಬರುವವರು ಮೊದಲು ಸ್ಯಾನಿಟೈಸರ್ ಬಳಕೆ ಮಾಡಿ ಒಳಗಡೆ ಪ್ರವೇಶ ಮಾಡುವಂತೆ ಜಾಗೃತಿ ಮೂಡಿಸುತ್ತಿರುವ ಕಿರಣ, ಹೊರಗಡೆ ಓಡಾಡಿ ಬರುವ ಜನರ ಜೊತೆಗೆ ಮನೆಯಲ್ಲಿನ ಸದಸ್ಯರ ಆರೋಗ್ಯವನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ.