ಹುಬ್ಬಳ್ಳಿ :ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೈಋತ್ಯ ರೈಲ್ವೆ ವಲಯ ಈಗ ಮತ್ತೊಂದು ಐತಿಹಾಸಿಕ ದಾಖಲೆ ಮಾಡಿದೆ. ಪಂಚ ತಿಂಗಳ ಆದಾಯ ಗಳಿಕೆಯಲ್ಲಿ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದೆ. ಏಪ್ರಿಲ್ನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿಯೇ ಪ್ಯಾಸೆಂಜರ್ ರೈಲು ಸಂಚಾರದ ಮೂಲಕ 1,048 ಕೋಟಿ ಆದಾಯವನ್ನು ಗಳಿಸುವ ಮೂಲಕ ನೈಋತ್ಯ ರೈಲ್ವೆ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದೆ.
ಕಳೆದ ವರ್ಷ ಏಪ್ರಿಲ್ನಿಂದ ಆಗಸ್ಟ್ವರೆಗೆ 450 ಕೋಟಿ ಆದಾಯ ಗಳಿಸಿತ್ತು. ಆದರೆ ಈಗ ಹಳೆಯ ದಾಖಲೆ ಬ್ರೇಕ್ ಮಾಡಿ ಹೊಸ ದಾಖಲೆಗೆ ನಾಂದಿ ಹಾಡಿದೆ. ಇನ್ನೂ ಕೋವಿಡ್ ಸಂದರ್ಭದಲ್ಲಿ ಬಹುತೇಕ ಪ್ಯಾಸೆಂಜರ್ ರೈಲು ಸೇವೆ ಬಂದ್ ಮಾಡಲಾಗಿತ್ತು. ಆದರೆ ಕೋವಿಡ್ ನಂತರ ಚೇತರಿಕೆ ಕಂಡಿರುವ ನೈಋತ್ಯ ರೈಲ್ವೆ ಪ್ಯಾಸೆಂಜರ್ ರೈಲಿನಲ್ಲಿಯೇ ಹೊಸ ಸಾಧನೆ ಮಾಡಿದೆ.