ಕರ್ನಾಟಕ

karnataka

ETV Bharat / state

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಜೊತೆ ಗುಂಡಿನ ಕಾಳಗ: ಹುಬ್ಬಳ್ಳಿ ಯೋಧ ಹುತಾತ್ಮ - ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್

ಜಮ್ಮು- ಕಾಶ್ಮೀರ ಗಡಿಯಲ್ಲಿ ಯೋಧರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಹುಬ್ಬಳ್ಳಿಯ ಯೋಧ ಹುತಾತ್ಮನಾಗಿದ್ದಾನೆ. ಇವರು ಕಳೆದ 9 ವರ್ಷದಿಂದ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಹುಬ್ಬಳ್ಳಿ ಯೋಧ ಬಲಿ

By

Published : Oct 1, 2019, 7:53 PM IST

ಹುಬ್ಬಳ್ಳಿ: ಜಮ್ಮು- ಕಾಶ್ಮೀರ ಗಡಿಯಲ್ಲಿ ಉಗ್ರರ ಜೊತೆಗೆ ನಡೆದ ಗುಂಡಿನ ಕಾಳಗದಲ್ಲಿ ಹುಬ್ಬಳ್ಳಿಯ ಯೋಧ ಹುತಾತ್ಮನಾಗಿದ್ದಾನೆ.

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದ ಮಂಜುನಾಥ ಹನುಮಂತಪ್ಪ ಓಲೇಕಾರ (29) ಹುತಾತ್ಮ ಯೋಧ.

9 ವರ್ಷದಿಂದ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದ. 20ನೇ ವಯಸ್ಸಿಗೆ ಯೋಧನಾಗಿ ಮಂಜುನಾಥ ಸೇವೆ ಆರಂಭಿಸಿದ್ದ. 6 ತಿಂಗಳ ಹಿಂದೆ‌ ಮದುವೆಯಾಗಿ ಗಡಿ ಕಾಯಲು ಮರಳಿ ಹೋಗಿದ್ದ. ಯೋಧ ಹುತಾತ್ಮನಾಗಿದ್ದಾನೆ ಎಂಬ ಸುದ್ದಿ ಕೇಳಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಯೋಧ ಜಮ್ಮು-ಕಾಶ್ಮೀರದಲ್ಲಿ ಹುತಾತ್ಮನಾಗಿರುವ ಬಗ್ಗೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಈಟಿವಿ ಭಾರತಕ್ಕೆ ಮಾಹಿತಿ‌ ನೀಡಿದ್ದು, ವಿಷಯ ತಿಳಿಯುತ್ತಿದಂತೆ ಗ್ರಾಮಕ್ಕೆ ಹುಬ್ಬಳ್ಳಿ ತಹಶೀಲ್ದಾರ್​ ಸಂಗಪ್ಪ ಭೇಟಿ‌ ನೀಡಿದ್ದಾರೆ.

ABOUT THE AUTHOR

...view details