ಕರ್ನಾಟಕ

karnataka

ETV Bharat / state

ಹೇಳೋಕೆ ಮಾತ್ರ ಹುಬ್ಬಳ್ಳಿ ಸ್ಮಾರ್ಟ್ ಸಿಟಿ: ಇಲ್ಲಿನ ಸಮಸ್ಯೆ ನೋಡಿದ್ರೆ ಗೊತ್ತಾಗುತ್ತೆ ವಸ್ತುಸ್ಥಿತಿ - ಹುಬ್ಬಳ್ಳಿಯ ಮ್ಯಾದರ ಓಣಿಯಲ್ಲಿ ಸಮಸ್ಯೆಗಳ ಸರಮಾಲೆ

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 65ರಲ್ಲಿ ಬರುವ ಮ್ಯಾದರ ಓಣಿಯಲ್ಲಿ ಸಮಸ್ಯೆಗಳ ಸರಮಾಲೆಯೇ ಜನರ ಮುಂದಿದೆ.

ಹುಬ್ಬಳ್ಳಿಯ ಮ್ಯಾದರ ಓಣಿಯಲ್ಲಿ ಸಮಸ್ಯೆಗಳ ಸರಮಾಲೆ
ಹುಬ್ಬಳ್ಳಿಯ ಮ್ಯಾದರ ಓಣಿಯಲ್ಲಿ ಸಮಸ್ಯೆಗಳ ಸರಮಾಲೆ

By

Published : Jan 14, 2022, 10:01 PM IST

ಹುಬ್ಬಳ್ಳಿ: ಅದು ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಮಾತ್ರವಲ್ಲ, ಎರಡನೇ ರಾಜಧಾನಿ ಅಂತ ಕರೆಸಿಕೊಳ್ಳುವ ನಗರ. ಈ ನಗರದ ಪರಿಚಯವಿಲ್ಲ ಎನ್ನುವವರೇ ಇಲ್ಲ. ಸಾಕಷ್ಟು ಹೆಸರು ಮಾಡಿರುವ ಇಲ್ಲಿನ ಅವ್ಯವಸ್ಥೆ ನೋಡಿದರೇ ನಿಜಕ್ಕೂ ಇಷ್ಟು ವರ್ಷ ಜನಪ್ರತಿನಿಧಿಗಳು ಹಾಗೂ ಸರ್ಕಾರ ಏನು ಮಾಡಿದೆ? ಎಂದು ಕೇಳಲೇಬೇಕು.

ಹುಬ್ಬಳ್ಳಿಯ ಮ್ಯಾದರ ಓಣಿಯಲ್ಲಿ ಸಮಸ್ಯೆಗಳ ಸರಮಾಲೆ

ಹುಬ್ಬಳ್ಳಿ ಮ್ಯಾದರ ಓಣಿಯ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಎಲ್ಲೆಂದರಲ್ಲಿ ತ್ಯಾಜ್ಯ ನೀರು, ದುರ್ನಾತ, ಅವ್ಯವಸ್ಥಿತ ಚರಂಡಿ, ರಸ್ತೆಗಳ ಸಮಸ್ಯೆ ಹಾಗೂ ಹತ್ತು ಹಲವು ಮೂಲಭೂತ ಸಮಸ್ಯೆಗಳನ್ನು ಹೊತ್ತು ಜನರು ಜೀವನ ನಡೆಸುತ್ತಿದ್ದಾರೆ. ಇದು ಚುನಾವಣೆಗೆ ನೆನಪಾಗುವ ವಾರ್ಡಿನಂತೆ ಗೋಚರಿಸುತ್ತಿದೆ.

ನೂರಾರು ಕೋಟಿ ಅನುದಾನ ಬಂದರೂ ವಾರ್ಡ್ ನಂಬರ್ 65ರಲ್ಲಿ ಬರುವ ಮ್ಯಾದರ ಓಣಿಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿಲ್ಲ. ಹೀಗಾಗಿ ಜನರು ಸಮಸ್ಯೆಗಳಿಗೆ ಅನಿವಾರ್ಯವಾಗಿ ಹೊಂದಿಕೊಂಡು ಜೀವನ ನಡೆಸುತ್ತಿದ್ದಾರೆ.

ABOUT THE AUTHOR

...view details