ಕರ್ನಾಟಕ

karnataka

ETV Bharat / state

ಸಿದ್ದಾರೂಢ ಮಠ ಟ್ರಸ್ಟಿಗಳ ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ಪರ್ತಕರ್ತರ ಕೈವಾಡ? - Privet Channel

ಸಿದ್ಧಾರೂಢ ಮಠದ ಟ್ರಸ್ಟಿಗಳ ಬ್ಲ್ಯಾಕ್‌ಮೇಲ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಖಾಸಗಿ ವಾಹಿನಿಯ ಪತ್ರಕರ್ತರು ಎಂದು‌ ಹೇಳಿಕೊಂಡು ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಹು-ಧಾ ಪೊಲೀಸ್ ಆಯುಕ್ತ ಆರ್ ದಿಲೀಪ್  ಬಹಿರಂಗಪಡಿಸಿದ್ದಾರೆ. ಆರೋಪಿಗಳು ಅಸಲಿ‌ ಪತ್ರಕರ್ತರಾ? ಅಥವಾ ನಕಲಿ ಪತ್ರಕರ್ತರಾ ಎಂಬುದು ತಿಳಿದು ಬಂದಿಲ್ಲ.

ಹು-ಧಾ ಪೊಲೀಸ್ ಆಯುಕ್ತ ಆರ್ ದೀಪಿಲ್ ಮಾಹಿತಿ ನೀಡಿದರು

By

Published : Oct 11, 2019, 5:14 PM IST

Updated : Oct 11, 2019, 6:15 PM IST

ಹುಬ್ಬಳ್ಳಿ: ಪ್ರತಿಷ್ಠಿತ ಸಿದ್ದಾರೂಢ ಮಠದ ಟ್ರಸ್ಟಿಗಳಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.‌ ಖಾಸಗಿ ವಾಹಿನಿಯ ಪತ್ರಕರ್ತರು ಎಂದು‌ ಹೇಳಿಕೊಂಡು ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಹು-ಧಾ ಪೊಲೀಸ್ ಆಯುಕ್ತ ಆರ್ ದಿಲೀಪ್ ಬಹಿರಂಗಪಡಿಸಿದ್ದು, ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ವಾಹಿನಿ ಹೆಸರು ಹೇಳಲು‌ ಸಾಧ್ಯವಿಲ್ಲ ಎಂದಿದ್ದಾರೆ.

ಹು-ಧಾ ಪೊಲೀಸ್ ಆಯುಕ್ತ ಆರ್​ ದಿಲೀಪ್..

ಶ್ರೀ ಸಿದ್ಧಾರೂಢ ಮಠದ ಟ್ರಸ್ಟಿ ಡಾ. ಬಸನಗೌಡ ಸಂಕನಗೌಡರ್​ರನ್ನು ಇನ್ನೊಬ್ಬ ಟ್ರಸ್ಟಿಯ ಮನೆಯಲ್ಲಿದ್ದಾಗ ಏಕಾಂತದ ದೃಶ್ಯ ಸೆರೆಹಿಡಿದ ದುಷ್ಕರ್ಮಿಗಳು, ಬೆದರಿಸಿ ಹತ್ತು ಲಕ್ಷ ರೂಪಾಯಿ ಸುಲಿಗೆ ಮಾಡಿದ್ದರು. ಹಾಗೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು.‌ ಇದರಿಂದ ಬೇಸತ್ತ ಟ್ರಸ್ಟಿ ಬಸನಗೌಡ, ಹಳೆ ಹುಬ್ಬಳ್ಳಿ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಕಾರ್ಯಾಚರಣೆಗೆ ಪ್ರಾರಂಭಿಸಿದ ಪೊಲೀಸರು, ಸಂತೋಷ್ ಪೂಜಾರಿ, ಸಂಜು ಪಟದಾರಿ, ಗಣೇಶ್ ಕನ್ನೂರ್ ಎಂಬುವರನ್ನು ಬಂಧಿಸಿದ್ದಾರೆ.

ಪ್ರಾರಂಭದಲ್ಲಿ ಪ್ರಕರಣದಲ್ಲಿ ಮಠದ ಸೂಪರ್‌ವೈಸರ್ ಸುನೀಲ್ ಕಮ್ಮಾರ್ ಚಿತಾವಣಿ ಇದ್ದಾರೆ ಎನ್ನಲಾಗಿತ್ತು. ಆದರೆ, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದಾಗ ಖಾಸಗಿ ವಾಹಿನಿಯ ವರದಿಗಾರರು ಕೃತ್ಯದಲ್ಲಿ ಭಾಗಿಯಾಗಿದ್ದು ಬೆಳಕಿಗೆ ಬಂದಿದೆ. ಆರೋಪಿಗಳು ಅಸಲಿ‌ ಪತ್ರಕರ್ತರಾ? ಅಥವಾ ನಕಲಿ ಪತ್ರಕರ್ತರಾ ಎಂಬುದು ಇನ್ನೂ ತಿಳಿದು ಬಂದಿಲ್ಲ.

Last Updated : Oct 11, 2019, 6:15 PM IST

ABOUT THE AUTHOR

...view details