ಹುಬ್ಬಳ್ಳಿ: ಸಿನಿಮಾ ಶೈಲಿಯಲ್ಲಿ ಕೈಯಲ್ಲಿ ಚಾಕು, ಮಂಕಿ ಕ್ಯಾಪ್ ಧರಿಸಿ ಕ್ಯಾಷಿಯರ್ ಚೇಂಬರ್ಗೆ ನುಗ್ಗಿದ್ದ ದರೋಡೆಕೋರನೊಬ್ಬ ಮಹಿಳೆಯನ್ನು ಬೆದರಿಸಿ ಹಣ ದರೋಡೆ ಮಾಡಿದ್ದ ಘಟನೆ ನಡೆದಿತ್ತು. ಇದೀಗ ಆರೋಪಿ ಚಲನವಲನದ ದೃಶ್ಯ ಬ್ಯಾಂಕ್ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ಜ.18 ರಂದು ಹುಬ್ಬಳ್ಳಿ ಕೊಪ್ಪಿಕರ್ ರಸ್ತೆಯ ಎಸ್ಬಿಐ ಬ್ಯಾಂಕ್ನಲ್ಲಿ ಹಾಡುಹಗಲೇ ವಿಜಯಪುರ ಮೂಲದ ಪ್ರವೀಣ್ ಎಂಬಾತ ದರೋಡೆ ಮಾಡಿ, ಎಸ್ಕೇಪ್ ಆಗಿದ್ದ. ಈತ ತನ್ನ ಮದುವೆಯನ್ನ ಅದ್ಧೂರಿಯಾಗಿ ಮಾಡಿಕೊಳ್ಳಬೇಕು ಎಂದು ಬ್ಯಾಂಕ್ ದರೋಡೆ ಮಾಡಿದ್ದ ಎನ್ನಲಾಗಿದೆ.