ಕರ್ನಾಟಕ

karnataka

ETV Bharat / state

ಬಿಲ್ ಕಟ್ಟಿಲ್ಲ ಎಂದು ಶವ ಕೊಡದ ಆರೋಪ: ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ - ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ

ಲಾಕ್​​ಡೌನ್ ಆಗಿ ಎಲ್ಲಾ ಜನರು ಕೆಲಸ ಇಲ್ಲದೆ, ಮನೆಯಲ್ಲಿಯೇ ಇರುವಂತಹ ಪರಿಸ್ಥಿತಿ ಎದುರಾಗಿದೆ. ಕೊರೊನಾ ಸೋಂಕು ದೃಢಪಟ್ಟರೆ ಖಾಸಗಿ ಆಸ್ಪತ್ರೆಗೆ ಹೋದರೆ ಸಾಕು ಮನೆ ಮಠ ಮಾರಿಕೊಂಡು ದುಡ್ಡು ಹಾಕಿದರೂ ಜೀವ ಉಳಿಯುತ್ತಿಲ್ಲ. ಅಷ್ಟಕ್ಕೂ ಹುಬ್ಬಳ್ಳಿಯಲ್ಲಿ ಜೀವ ಉಳಿಸುವ ಆಸ್ಪತ್ರೆಯೇ ಹಣ ತುಂಬುವವರೆಗೂ ಮೃತದೇಹವನ್ನು ನೀಡುವುದಿಲ್ಲ ಎಂದು ಮೃತರ ಕುಟುಂಬದೊಂದಿಗೆ ಕ್ಯಾತೆ ತೆಗೆದ ಆರೋಪ ಕೇಳಿ ಬಂದಿದೆ.

Hubli Sanjeevini Hospitalwhich does not offer a dead body
ಸಂಜೀವಿನಿ ಸ್ಪೇಷಾಲಿಟಿ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ

By

Published : Jun 4, 2021, 1:28 PM IST

ಹುಬ್ಬಳ್ಳಿ: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದರೆ ಯಾವುದೇ ಆಸ್ಪತ್ರೆ ಅವರಿಗೆ ಹಣದ ಬೇಡಿಕೆ ಇಡಬಾರದು ಸರ್ಕಾರ ಆದೇಶ ಮಾಡಿದೆ. ಆದರೆ ಹುಬ್ಬಳ್ಳಿಯ ಆಸ್ಪತ್ರೆಯೊಂದು ಹಣ ಕಟ್ಟದ ಕಾರಣಕ್ಕೆ ಶವ ನೀಡಲು ಹಿಂದೇಟು ಹಾಕಿದ ಆರೋಪ ಕೇಳಿ ಬಂದಿದೆ.

ಹುಬ್ಬಳ್ಳಿ ಶಿರೂರ ಪಾರ್ಕ್‌ ರೋಡ್​ನಲ್ಲಿರುವ ಸಂಜೀವಿನಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೇ 27ರಂದು ಆಸ್ಪತ್ರೆಗೆ ದಾಖಲಾಗಿದ್ದ ನಸೀಮಾಭಾನು ಜಮಿಲ್ ಅಹ್ಮದ ಶೇಖ್ ಎನ್ನುವವರು ನಿನ್ನೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಆದರೆ ಅಷ್ಟರಲ್ಲಿಯೇ 2,27,250 ರೂಪಾಯಿ ಬಿಲ್ ಆಗಿದೆ. ಮೊದಲು ಕೊಟ್ಟಿದ್ದ 80 ಸಾವಿರ ರೂಪಾಯಿ ಮೈನಸ್ ಮಾಡಿದ್ರೂ 1,47,250 ರೂಪಾಯಿ ಕೊಟ್ಟರೆ ಮಾತ್ರ ಶವವನ್ನ ಕೊಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ ಎಂದು ಮೃತಳ ಕುಟುಂಬದವರು ವಿದ್ಯಾನಗರದ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಮಧ್ಯ ಪ್ರವೇಶ ಮಾಡಿದ ಪೊಲೀಸರು, ಶವವನ್ನು ಅಸ್ಪತ್ರೆ ಸಿಬ್ಬಂದಿಯಿಂದ ಬಿಡಿಸಿ ಸಂಬಂಧಿಗಳಿಗೆ ಒಪ್ಪಿಸಿ ಕಳುಹಿಸಿದ್ದಾರೆ.

ABOUT THE AUTHOR

...view details