ಹುಬ್ಬಳ್ಳಿ :ಇಂದಿನಿಂದ ದೇವಸ್ಥಾನಗಳ ಬಾಗಿಲು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಆದರೆ, ವಾಣಿಜ್ಯನಗರಿಯ ಪ್ರತಿಷ್ಠಿತ ದೇವಸ್ಥಾನದಲ್ಲಿ ಮಾತ್ರ ಜೂನ್ 24ರ ತನಕ ಭಕ್ತಾಧಿಗಳ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.
ನಗರದ ಕೋರ್ಟ್ ಸರ್ಕಲ್ ಬಳಿಯ ಶಿರಡಿ ಸಾಯಿಬಾಬಾ ಮಂದಿರವನ್ನು ಜೂನ್ 24ರವರೆಗೆ ಬಂದ್ ಮಾಡಲು ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ. ದೇವಸ್ಥಾನವು ಮುಖ್ಯ ರಸ್ತೆಯಲ್ಲಿರುವುದರಿಂದ ಹಾಗೂ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
ಸಾಯಿಬಾಬಾ ಮಂದಿರಕ್ಕೆ ಜೂನ್ 24 ನಂತರವೇ ಭಕ್ತರಿಗೆ ಪ್ರವೇಶ ಜೂನ್ 24ರ ನಂತರ ಸೂಕ್ತ ಕ್ರಮಗಳನ್ನು ಕೈಗೊಂಡು ಭಕ್ತಾಧಿಗಳಿಗೆ ಪ್ರವೇಶ ಕಲ್ಪಿಸಲಾಗುವುದು. ಸರ್ಕಾರದ ಆದೇಶದ ಪ್ರಕಾರ ಮುಂಜಾಗ್ರತಾ ಕ್ರಮಕೈಗೊಂಡು ದೇವಸ್ಥಾನ ಆರಂಭಿಸುತ್ತೇವೆ ಎಂದು ಸಾಯಿಬಾಬಾ ಆಡಳಿತ ಮಂಡಳಿಯ ಮುಖಂಡ ವೆಂಕಟರಾವ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ.
ಸಾಯಿಬಾಬಾ ಮಂದಿರದಲ್ಲಿ ಯಾವುದೇ ಹಣ ಹಾಗೂ ಅಧಿಕಾರದ ದುರುಪಯೋಗ ಆಗಿಲ್ಲ:
ಸಾಯಿಬಾಬಾ ಮಂದಿರದಲ್ಲಿ ಯಾವುದೇ ಹಣದ ದುರುಪಯೋಗವಾಗಲಿ, ಆಡಳಿತ ದುರುಪಯೋಗವಾಗಲಿ ನಡೆದಿಲ್ಲ. ಕರ್ನಾಟಕ ಸಂಗ್ರಾಮ ಸೇನೆಯ ಮುಖಂಡ ಸಂಜೀವ ದುಮ್ಮಕನಾಳ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎಂದು ಸಾಯಿಬಾಬಾ ಮಂದಿರದ ಆಡಳಿತ ಮಂಡಳಿಯ ಮುಖಂಡರಾದ ವೆಂಕಟರಾವ್ ಕುಲಕರ್ಣಿ ಹೇಳಿದರು.
ಸಂಗ್ರಾಮ ಸೇನೆಯ ಸಂಜೀವ ದುಮ್ಮಕನಾಳ ಅವರು ಸಹಕಾರಿ ಸಂಘದ ಸಹಾಯಕ ನಿರ್ದೇಶಕರು ಶಾಸನ ಬದ್ದ ವಿಚಾರಣೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ ಎರಡು ವರ್ಷದಿಂದ ಯಾವುದೇ ಶಾಸನಬದ್ಧ ವಿಚಾರಣೆ ನಡೆದಿಲ್ಲ. ಸಹಕಾರಿ ಸಂಘದ ಸಹಾಯಕ ನಿರ್ದೇಶಕರು ದೂರು ಅರ್ಜಿ ವಿಚಾರಣೆ ಮಾಡಿದ್ದಾರೆ. ಸಾಯಿಬಾಬಾ ಮಂದಿರ ಆಡಳಿತ ಮಂಡಳಿಯ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದು ಸರಿಯಲ್ಲ, ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಲು ಅವರು ಯಾರು ಇದೆಲ್ಲಾ ಷಡ್ಯಂತ್ರ ಎಂದು ಕಿಡಿ ಕಾರಿದರು.