ಹುಬ್ಬಳ್ಳಿ :ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾದ ಆರೋಪಿತರ ಕುಟುಂಬಗಳಿಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಫುಡ್ ಕಿಟ್ ಮತ್ತು ಧನ ಸಹಾಯ ನೀಡುವುದಾಗಿ ಪ್ರಕಟಣೆ ನೀಡಿದ್ದರು.
ಇದು ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿತ್ತು. ಹುಬ್ಬಳ್ಳಿ ಕಸಬಾಪೇಟೆಯ ಮಸ್ತಾನ್ ಶಾ ಶಾದಿ ಮಹಲ್ನಲ್ಲಿ ಫುಡ್ ಕಿಟ್ ವಿತರಿಸಲಿದ್ದಾರೆಂಬ ಮಾಹಿತಿ ಇತ್ತು.
ಎಸಿಪಿಯವರಿಗೆ ಮನವಿ ಪತ್ರ ಸಲ್ಲಿಕೆ ಜಮೀರ್ ಅಹ್ಮದ್ ಫುಡ್ ಕಿಟ್ ವಿತರಣೆಗೆ ಖಂಡನೆ ವ್ಯಕ್ತವಾಗಿತ್ತು. ಅಲ್ಲದೇ ಕಾಂಗ್ರೆಸ್ ನಾಯಕರು ಹಾಗೂ ಮುಖಂಡರು ಇದರಲ್ಲಿ ಭಾಗವಹಿಸಲು ನಿರಾಸ್ತಕಿ ತೋರಿದ್ದರಿಂದ ಕಾರ್ಯಕ್ರಮ ರದ್ದುಪಡಿಸಲಾಗಿದೆ.
ಗಲಭೆ ಪ್ರಕರಣದಲ್ಲಿ ಭಾಗಿಯದವರಿಗೆ ಧನ ಸಹಾಯ ಹಾಗೂ ಫುಡ್ ಕಿಟ್ ವಿತರಣೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ನೇತೃತ್ವದಲ್ಲಿ ಎಸಿಪಿಯವರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ:ಸರ್ಕಾರದ ನಿರ್ಧಾರ ಅಭ್ಯರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ: ಪ್ರಿಯಾಂಕ್ ಖರ್ಗೆ