ಹುಬ್ಬಳ್ಳಿ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ಡೌನ್ ಆದೇಶ ಮಾಡಲಾಗಿದೆ. ಆದ್ರೆ ಹುಬ್ಬಳ್ಳಿಯಲ್ಲಿ ಮಾತ್ರ ಇದನ್ನು ಮೀರಿ ರಾಮ ನವಮಿ ಆಚರಿಸಲಾಗಿದೆ. ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹುಬ್ಬಳ್ಳಿ: ಪೊಲೀಸರ ಎದುರೇ ರಾಮ ನವಮಿ ಆಚರಣೆ! - Ramanavami celebration
ದೇಶದಾದ್ಯಂತ ಲಾಕ್ಡೌನ್ ಆದೇಶವಿದ್ದರೂ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪೊಲೀಸರೇ ರಾಮ ನವಮಿ ಆಚರಿಸಲು ಅವಕಾಶ ನೀಡಿದ್ದಾರೆ ಎನ್ನಲಾಗಿದೆ. ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪೊಲೀಸರ ಎದುರೇ ರಾಮನವಮಿ ಆಚರಣೆ
ಲಾಕ್ಡೌನ್ ಇರುವುದರಿಂದ ಜನರು ಮನೆಯಿಂದ ಹೊರಗಡೆ ಬರಬಾರದು ಎಂದು ಸರ್ಕಾರ ಆದೇಶ ನೀಡಿದೆ. ಆದ್ರೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪೊಲೀಸರೇ ರಾಮ ನವಮಿ ಮಾಡಲು ಅವಕಾಶ ನೀಡಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಅಂತರ ಕಾಯ್ಧುಕೊಳ್ಳಬೇಕು. ಒಟ್ಟಾಗಿ ಜನರು ಸೇರಬಾರದು ಎಂದು ಹೇಳುವ ಪೊಲೀಸರ ಎದುರು ರಾಮ ನವಮಿ ಆಚರಿಸಲಾಗಿದ್ದು, ಪೊಲೀಸರ ನಡೆ ತೀವ್ರ ಟೀಕೆಗೆ ಗುರಿಯಾಗಿದೆ.
Last Updated : Apr 2, 2020, 7:04 PM IST