ಹುಬ್ಬಳ್ಳಿ:ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹುಬ್ಬಳ್ಳಿ, ಕುಂದಗೋಳದಲ್ಲಿ ರೈತರು ಬೆಳೆದ ಶೇಂಗಾ ಬೆಳೆಗೆ ಹಾನಿ ಸಂಭವಿಸಿದೆ.
ಹುಬ್ಬಳ್ಳಿ: ಮಳೆಯಿಂದ ಅಪಾರ ಪ್ರಮಾಣದ ಶೇಂಗಾ ಬೆಳೆ ಹಾನಿ - Rainfall causes peanut crop damage
ಕಳೆದ ಐದಾರು ದಿನಗಳಿಂದ ಹುಬ್ಬಳ್ಳಿಯಲ್ಲಿ ಮಳೆಯಾಗುತ್ತಿದ್ದು, ಮಳೆಯಿಂದ ಶೇಂಗಾ ಬೆಳೆಗೆ ಹಾನಿಯಾಗಿದೆ. ಕೂಡಲೇ ಬೆಂಬಲ ಬೆಲೆ ನೀಡಿ, ಖರೀದಿ ಕೇಂದ್ರ ತೆರೆಯಲು ರೈತರು ಒತ್ತಾಯಿಸಿದ್ದಾರೆ.
ಮಳೆಯಿಂದ ಅಪಾರ ಪ್ರಮಾಣದ ಶೇಂಗಾ ಬೆಳೆ ಹಾನಿ
ಕಳೆದ ಐದಾರು ದಿನಗಳಿಂದ ಮಳೆಯಾಗುತ್ತಿದ್ದು, ಮಳೆಯಿಂದ ಶೇಂಗಾ ಬೆಳೆಗೆ ಹಾನಿಯಾಗಿದೆ. ಕಳೆದ ಬಾರಿಯೂ ಪ್ರವಾಹಕ್ಕೆ ಶೇಂಗಾ ಸೇರಿದಂತೆ ಇತರೆ ಬೆಳೆಗಳು ಕೊಚ್ಚಿ ಹೋಗಿದ್ದವು. ಈ ಬಾರಿ ಮಳೆಯಿಂದ ಅಳಿದುಳಿದ ಬೆಳೆ ಪಡೆಯಲು ರೈತರು ಹರಸಾಹಸ ಪಡಬೇಕಾಗಿದೆ.
ಬೆಳೆಗಳನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದು, ಆತಂಕ ಹೆಚ್ಚಾಗಿದೆ. ಕೂಡಲೇ ಬೆಂಬಲ ಬೆಲೆ ನೀಡಿ, ಖರೀದಿ ಕೇಂದ್ರ ತೆರೆಯಲು ರೈತರು ಒತ್ತಾಯಿಸಿದ್ದಾರೆ.
Last Updated : Oct 12, 2020, 12:17 PM IST