ಹುಬ್ಬಳ್ಳಿ: ಟಿಕೆಟ್ ರಹಿತ/ಕ್ರಮರಹಿತ ಪ್ರಯಾಣ ಮತ್ತು ಅನಧಿಕೃತ ಮಾರಾಟವನ್ನು ತಡೆಗಟ್ಟಿ, ಟಿಕೆಟ್ ಖರೀದಿಸಿ ಪ್ರಯಾಣಿಸುವವರಿಗೆ ಆರಾಮದಾಯಕ, ಸುರಕ್ಷಿತ ಪ್ರಯಾಣ ಮತ್ತು ಉತ್ತಮ ಸೇವೆಯನ್ನು ಸುನಿಶ್ಚಿತಗೊಳಿಸಲು ಹುಬ್ಬಳ್ಳಿ ವಿಭಾಗವು ರೈಲುಗಳಲ್ಲಿ ಮತ್ತು ರೈಲು ನಿಲ್ದಾಣಗಳಲ್ಲಿ ನಿಯಮಿತವಾಗಿ ಟಿಕೆಟ್ ತಪಾಸಣಾ ಅಭಿಯಾನವನ್ನು ನಡೆಸುತ್ತಿದೆ.
ಟಿಕೆಟ್ರಹಿತ ಪ್ರಯಾಣಿಕರಿಂದ 6 ಕೋಟಿ ರೂ ಆದಾಯ ಪಡೆದ ಹುಬ್ಬಳ್ಳಿ ರೈಲ್ವೆ
ನವೆಂಬರ್ 2022ರಲ್ಲಿ ಟಿಕೆಟ್ ರಹಿತ/ಕ್ರಮರಹಿತ ಪ್ರಯಾಣದ ಒಟ್ಟು 8,967 ಪ್ರಕರಣಗಳನ್ನು ಪತ್ತೆ ಹಚ್ಚಿ 60.3 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಟಿಕೆಟ್ರಹಿತ ಪ್ರಯಾಣಿಕರಿಂದ 6 ಕೋಟಿ ರೂಪಾಯಿ ಆದಾಯ ಪಡೆದ ಹುಬ್ಬಳ್ಳಿ ರೈಲ್ವೆ
ನವೆಂಬರ್ 2022ರಲ್ಲಿ ಟಿಕೆಟ್ ರಹಿತ/ಕ್ರಮರಹಿತ ಪ್ರಯಾಣದ ಒಟ್ಟು 8967 ಪ್ರಕರಣಗಳನ್ನು ಪತ್ತೆ ಹಚ್ಚಿ 60.3 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ 250 ದಿನಗಳಲ್ಲಿ ಹುಬ್ಬಳ್ಳಿ ವಿಭಾಗವು ಟಿಕೆಟ್ ರಹಿತ/ಕ್ರಮರಹಿತ ಪ್ರಯಾಣದ ಒಟ್ಟು 82,679 ಪ್ರಕರಣಗಳನ್ನು ಪತ್ತೆ ಹಚ್ಚಿ ಒಟ್ಟು 6 ಕೋಟಿ ರೂಪಾಯಿಗಳ ಆದಾಯವನ್ನುಗಳಿಸಿದೆ ಎಂದು ಹುಬ್ಬಳ್ಳಿ ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಹರೀತಾ ಎಸ್. ತಿಳಿಸಿದ್ದಾರೆ.
ಇದನ್ನೂ ಓದಿ:ವಾಹನ ಸವಾರರ ಮೇಲೆ ಹೊಸ ಅಸ್ತ್ರ: ತಂತ್ರಜ್ಞಾನ ಬಳಸಿ ಸಂಚಾರಿ ನಿಯಮ ಉಲ್ಲಂಘನೆಗೆ ಕ್ರಮ