ಹುಬ್ಬಳ್ಳಿ: ಸಂಚಾರ ಪೊಲೀಸರು ವಾಹನ ಚಾಲಕನಿಗೆ ಲಂಚ ನೀಡುವಂತೆ ಒತ್ತಾಯಿಸಿದ್ದಾರೆಂದು ಆರೋಪಿಸಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹುಬ್ಬಳ್ಳಿ ಸಂಚಾರ ಪೊಲೀಸರ ಮೇಲೆ ಲಂಚ ಸ್ವೀಕಾರ ಆರೋಪ: ವಿಡಿಯೊ ವೈರಲ್ - hubli
ಹುಬ್ಬಳ್ಳಿ ಸಂಚಾರ ಪೊಲೀಸರು ವಾಹನ ಚಾಲಕನಿಗೆ ಲಂಚ ನೀಡುವಂತೆ ಒತ್ತಾಯಿಸಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹುಬ್ಬಳ್ಳಿ
ಇನ್ನೂ ಹಣ ನೀಡಲು ವ್ಯಕ್ತಿ ನಿರಾಕರಿಸಿದಾಗ ಹುಚ್ಚ ಎಂದು ಹೀಯಾಳಿಸಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ನೀಡಿರುವ ಮಾಹಿತಿಯಲ್ಲಿ ವಾಹನಗಳ ದಾಖಲೆಗಳು ಸರಿಯಾಗಿದ್ದರೂ ಸಹ ಹಣ ನೀಡುವಂತೆ ಸಿಬ್ಬಂದಿ ಒತ್ತಾಯಿಸಿದ್ದಾರಂತೆ. ಅಲ್ಲದೇ ಸಿಬ್ಬಂದಿ ಬೆದರಿಕೆ ಹಾಕಿದ್ದಾರೆ ಎಂಬ ವಿಡಿಯೋವನ್ನು ಹರಿಬಿಟ್ಟಿದ್ದಾರೆ.
ಸಾರ್ವಜನಿಕರನ್ನು ಪೊಲೀಸರು ಕಿತ್ತು ತಿನ್ನುತ್ತಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಲಾಗಿದೆ. ವಿಡಿಯೋ ಹರಿಬಿಟ್ಟವನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.