ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಹುಬ್ಬಳ್ಳಿ ನಗರವೇ ಸ್ಮಾರ್ಟ್ ಆಗುತ್ತದೆ ಎಂದುಕೊಂಡಿದ್ದವರಿಗೆ ನಿರಾಸೆಯಾಗಿದೆ. ಸ್ಮಾರ್ಟ್ ಸಿಟಿಯಿಂದ ಅವಳಿ ನಗರಕ್ಕೆ ಸೌಂದರ್ಯ ಬಂದಿದೆಯೋ ಇಲ್ಲವೋ. ಆದರೆ, ಬಹುತೇಕ ಜನರಿಗೆ ಅಸ್ತಮಾ ಹಾಗೂ ಇನ್ನಿತರ ರೋಗ ಮಾತ್ರ ಬಂದಿವೆ.
ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಾರ್ವಜನಿಕರ ಆಗ್ರಹ ಅವಳಿ ನಗರವನ್ನು ಸ್ಮಾರ್ಟ್ ಮಾಡಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ 'ಸ್ಮಾರ್ಟ್ ಸಿಟಿ ಯೋಜನೆ' ಜಾರಿಗೆ ತಂದಿದೆ. ಆದರೆ, ಈ ಯೋಜನೆಯಿಂದ ಸ್ಮಾರ್ಟ್ ಆಗಬೇಕಿದ್ದ ನಗರ ಸಂಪೂರ್ಣ ಧೂಳಿನಿಂದ ಕೂಡಿದೆ. ಹೀಗಾಗಿ ಧೂಳು ಮುಕ್ತ ಮಾಡುವ ಜತೆಗೆ ನಮ್ಮನ್ನು ರೋಗ ಮುಕ್ತರನ್ನಾಗಿ ಮಾಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈಗಾಗಲೇ ವಾಣಿಜ್ಯ ನಗರಿ ಹುಬ್ಬಳ್ಳಿಯ ಪರಿಸ್ಥಿತಿ ನೋಡಿದರೆ, ಕೊರೊನಾ, ಒಮಿಕ್ರಾನ್ಗಾಗಿ ಜನರು ಮಾಸ್ಕ್ ಹಾಕುವುದಕ್ಕಿಂತ ಹೆಚ್ಚಾಗಿ ಧೂಳಿನಿಂದ ಆರೋಗ್ಯ ಕಾಪಾಡಿಕೊಳ್ಳಲು ಪರದಾಡುವಂತಾಗಿದೆ. ಧೂಳಿನಿಂದ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ಹೋದರೆ, ಹಲವಾರು ರೋಗದ ಭಯ ಹುಟ್ಟುತ್ತದೆ ಎಂಬುವುದು ಸಾರ್ವಜನಿಕರ ಆತಂಕದ ಮಾತು.
ಒಟ್ಟಿನಲ್ಲಿ ಕುಂಟುತ್ತಾ ಸಾಗಿರುವ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಜನರು ಅಕ್ಷರಶಃ ನರಕಯಾತನೆ ಅನುಭವಿಸುವಂತಾಗಿದೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಿದೆ.
ಇದನ್ನೂ ಓದಿ:ಶಾಲಾ ಮಕ್ಕಳ ಜೊತೆ ಬೆರೆತ ಡಿ.ಕೆ.ಶಿವಕುಮಾರ್: ಸೂಕ್ತ ಕ್ರಮಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಒತ್ತಾಯ