ಕರ್ನಾಟಕ

karnataka

ETV Bharat / state

ನೆಗಡಿ, ಕೆಮ್ಮು ಬಂದ್ರೆ ಚಿಕಿತ್ಸೆ ನಿಡುತ್ತಿಲ್ಲ.. ಸರ್ಕಾರದ ನಡೆಗೆ ಹುಬ್ಬಳ್ಳಿ ಜನತೆ ಆಕ್ರೋಶ - Hubli people

ಮೆಡಿಕಲ್ ಶಾಪ್​ನಲ್ಲಿ ಮಾತ್ರೆಗಳು ಸಿಗುತ್ತಿಲ್ಲ. ಚಿಕ್ಕ ಮಕ್ಕಳಿಗೆ ಜ್ವರ ಬಂದ್ರೆ ಏನು ಮಡೋದು? ಎಲ್ಲದಕ್ಕೂ ಕೊರೊನಾ ಎಂಬ ಹಣೆಪಟ್ಟಿ ಕಟ್ಟಿಬಿಡುತ್ತಾರೋ ಎಂಬ ಭಯದಿಂದ ಯಾರಿಗೂ ಹೇಳದ ಪರಿಸ್ಥಿತಿಯಲ್ಲಿ ಜನತೆ ಬದುಕುತ್ತಿದ್ದಾರೆ..

ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹುಬ್ಬಳ್ಳಿ ಜನತೆ
ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹುಬ್ಬಳ್ಳಿ ಜನತೆ

By

Published : Jul 28, 2020, 8:53 PM IST

Updated : Jul 28, 2020, 9:34 PM IST

ಹುಬ್ಬಳ್ಳಿ :ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನೆಗಡಿ, ಕೆಮ್ಮಿಗೆ ಸ್ಥಳೀಯ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡದ ಪರಿಣಾಮ ಹುಬ್ಬಳ್ಳಿಯ ಜನತೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಕೊರೊನಾದಿಂದ ನಗರ ವಾಸಿಗಳು ಆತಂಕದಲ್ಲಿದ್ದಾರೆ. ಮಳೆಗಾಲ ಬೇರೆ ಪ್ರಾರಂಭವಾಗಿದೆ. ನೆಗಡಿ, ಕೆಮ್ಮು, ಜ್ವರದ ಹೆದರಿಕೆ ಹೆಚ್ಚಿದೆ. ಇವೆಲ್ಲವೂ ಕೊರೊನಾ ಲಕ್ಷಣಗಳೇ ಆಗಿದ್ದರಿಂದಾಗಿ ಇನ್ನಷ್ಟು ಭಯ ಹುಟ್ಟಿಸಿದೆ.

ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹುಬ್ಬಳ್ಳಿ ಜನತೆ

ಕೊರೊನಾ ಕೇವಲ ಸಾಮಾನ್ಯ ವೈರಸ್ ಹಾಗೂ ಅದಕ್ಕೆ ಭಯ ಪಡುವ ಅವಶ್ಯಕತೆ ಇಲ್ಲ. ಕೋವಿಡ್ ಕೇಂದ್ರದಲ್ಲಿ ನೆಗಡಿ, ಕೆಮ್ಮು, ಜ್ವರದ ವಿಟಮಿನ್ ಮಾತ್ರೆಗಳನ್ನು ‌ನೀಡುತ್ತಾರೆ. ಸ್ಪೆಷಲ್‌ ಚಿಕಿತ್ಸೆ ಇಲ್ಲ ಎಂದು ವಿಡಿಯೋ ಹರಿಬಿಡುತ್ತಿದ್ದಾರೆ. ಆದ್ದರಿಂದ ಕೊರೊನಾಕ್ಕೆ ಸಂಬಂಧಿಸಿದಂತೆ ರಾಜ್ಯದ ಜನತೆಯಲ್ಲಿ ಅನುಮಾನ ಮೂಡುತ್ತಿದೆ. ಸರ್ಕಾರ ಸರಿಯಾದ ಮಾರ್ಗದರ್ಶನ ನೀಡಬೇಕು, ಸಣ್ಣಪುಟ್ಟ ಕಾಯಿಲೆಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಮೆಡಿಕಲ್ ಶಾಪ್​ನಲ್ಲಿ ಮಾತ್ರೆಗಳು ಸಿಗುತ್ತಿಲ್ಲ. ಚಿಕ್ಕ ಮಕ್ಕಳಿಗೆ ಜ್ವರ ಬಂದ್ರೆ ಏನು ಮಡೋದು? ಎಲ್ಲದಕ್ಕೂ ಕೊರೊನಾ ಎಂಬ ಹಣೆಪಟ್ಟಿ ಕಟ್ಟಿಬಿಡುತ್ತಾರೋ ಎಂಬ ಭಯದಿಂದ ಯಾರಿಗೂ ಹೇಳದ ಪರಿಸ್ಥಿತಿಯಲ್ಲಿ ಜನತೆ ಬದುಕುತ್ತಿದ್ದಾರೆ. ಕೂಡಲೇ ಸರ್ಕಾರ ಒಂದು ದಿಟ್ಟ ನಿರ್ಧಾರ ಕೈಗೊಂಡು ಜನರಲ್ಲಿ ಆತಂಕ ದೂರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

Last Updated : Jul 28, 2020, 9:34 PM IST

ABOUT THE AUTHOR

...view details