ಕರ್ನಾಟಕ

karnataka

ETV Bharat / state

ಬುದ್ಧಿ ಗಿದ್ದಿ ಇಲ್ಲೇನ್ರಿ ಇವ್ರಿಗೆ,, ಎಷ್ಟ್​​ ಹೇಳಿದ್ರೂ ಸಾಮಾಜಿಕ ಅಂತರ ಕಾಯ್ದುಕೊಳ್ತಿಲ್ಲ !! - ಕೋವಿಡ್- 19

ನಗರದ ಎಪಿಎಂಸಿಯಲ್ಲಿ ಕಿರಾಣಿ ಸಾಮಾಗ್ರಿ ಖರೀದಿಗೆ ಕೂಪನ್ ವ್ಯವಸ್ಥೆ ಕಲ್ಪಿಸಿದ್ದರೂ ಕೂಡಾ‌ ಜನ ಗುಂಪು ಗುಂಪಾಗಿ ಸೇರುತ್ತಿದ್ದಾರೆ.

hubli-people-not-maintain-social-distance
ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹುಬ್ಬಳ್ಳಿ ಜನತೆ

By

Published : Apr 12, 2020, 11:59 PM IST

Updated : Apr 13, 2020, 12:05 AM IST

ಹುಬ್ಬಳ್ಳಿ :ಕೋವಿಡ್-19ನಿಂದಾಗಿ ಇಡೀ ದೇಶವೇ ಮತ್ತೆ ಏಪ್ರಿಲ್ 30ರವರೆಗೆ ಲಾಕ್‌ಡೌನ್‌ ಆಗಲಿದೆ. ಸರ್ಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮನೆಯಲ್ಲೇ ಇರಿ ಎಂದು ಎಷ್ಟೆಲ್ಲಾ ಜಾಗೃತಿ ಮೂಡಿಸುತ್ತಿದ್ದರೂ ಇದು ಹುಬ್ಬಳ್ಳಿ ಜನರ ಅರಿವಿಗೆ ಬರುತ್ತಿಲ್ಲ.

ಗುಂಪು ಸೇರಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಪ್ರತಿ ಸಾರಿ ಹೇಳಿದರೂ ಕೂಡ ಜನ ಮಾತ್ರ ಗುಂಪಿನಲ್ಲೇ ಗೋವಿಂದ ಎನ್ನುತ್ತಿದ್ದಾರೆ. ನಗರದ ಎಪಿಎಂಸಿಯಲ್ಲಿ ಕಿರಾಣಿ ಸಾಮಾಗ್ರಿ ಖರೀದಿಗೆ ಕೂಪನ್ ವ್ಯವಸ್ಥೆ ಕಲ್ಪಿಸಿದ್ದರೂ ಕೂಡಾ‌ ಜನ ಗುಂಪು ಗುಂಪಾಗಿ ಸೇರುತ್ತಿದ್ದಾರೆ. ಯಾವುದಕ್ಕೂ ಬಗ್ಗದ ಸಾರ್ವಜನಿಕರು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿರ್ಲಕ್ಷ್ಯತೆ ವಹಿಸುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ.

Last Updated : Apr 13, 2020, 12:05 AM IST

ABOUT THE AUTHOR

...view details