ಕರ್ನಾಟಕ

karnataka

ETV Bharat / state

ಕೊರೊನಾದ ನಡುವೆಯೂ ಸಂಬಂಧಗಳನ್ನು ಉಳಿಸಿಕೊಳ್ಳಲು ಹುಬ್ಬಳ್ಳಿ ಜನರಿಂದ ವಿಶಿಷ್ಟ ಯತ್ನ .. - Hubli

ಈಗ ಒಬ್ಬರು ಇನ್ನೊಬ್ಬರನ್ನು ಮಾತನಾಡಿಸಬೇಕಾದ್ರೆ ಒಂದು ಮೊಬೈಲ್ ಇಲ್ಲವಾದ್ರೆ ಮನೆಯ ಕಾಂಪೌಂಡ್ ಬಳಿ ನಿಂತು ಮಾತನಾಡುವ ಪ್ರಸಂಗ ಬಂದೊದಗಿದೆ..

Hubli
ಮನೆಯ ಕಾಂಪೌಂಡ್ ಬಳಿ ನಿಂತು ಮಾತನಾಡುವ ಪ್ರಸಂಗ

By

Published : Jul 14, 2020, 5:05 PM IST

ಹುಬ್ಬಳ್ಳಿ :ಕೊರೊನಾ ವಕ್ಕರಿಸಿದ ಪರಿಣಾಮ ಅದೆಷ್ಟೋ ಸಂಬಂಧಗಳನ್ನು ಕಳೆದಕೊಳ್ಳುವ ಭೀತಿಯಲ್ಲಿ ಜನ ಜೀವನ ನಡೆಸುತ್ತಿದ್ದಾರೆ.

ಹುಬ್ಬಳ್ಳಿ ಜನತೆ ಸಂಬಂಧಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ..

ಪಟ್ಟಣಕ್ಕೆ ಕಾಲಿಟ್ಟ ಕೊರೊನಾ ಇದೀಗ ಹಳ್ಳಿಗಳಲ್ಲಿ ಸಹ ಕಾಣಿಸುತ್ತಿದೆ. ಹಳ್ಳಿಗಳಲ್ಲಿ ಮನೆಯ ಪಕ್ಕ ಮನೆ ಇರುವುದರಿಂದ ಗ್ರಾಮೀಣ ಜನರಿಗೆ ಇನ್ನೂ ಹೆಚ್ಚು ಆತಂಕ ಶುರುವಾಗಿದೆ. ಮನೆಯಲ್ಲಿ ಶುಭ ಕಾರ್ಯ ಮಾಡಬೇಕಾದ್ರೆ ಎಲ್ಲಾ ಸಂಬಂಧಿಕರನ್ನು ಕರೆದು ವಿಜೃಂಭಣೆಯಿಂದ ಆಚರಿಸಲಾಗುತಿತ್ತು. ಆದರೆ, ಈಗಿನ ಪರಿಸ್ಥಿತಿ ಹೇಗಿದೆ ಅಂದ್ರೆ, ಮನೆಯಲ್ಲಿ ಯಾರಿಗಾದ್ರೂ ಸಮಸ್ಯೆ ಅಂತಾ ಬಂದ್ರೂ ಸಹ ಹೇಳದ ರೀತಿ ಕೊರೊನಾ ಮಾಡಿದೆ.

ನಗರದಲ್ಲಿ ಒಬ್ಬರು ಇನ್ನೊಬ್ಬರನ್ನು ಮಾತನಾಡಿಸಬೇಕಾದ್ರೆ ಒಂದು ಮೊಬೈಲ್ ಇಲ್ಲವಾದ್ರೆ ಮನೆಯ ಕಾಂಪೌಂಡ್ ಬಳಿ ನಿಂತು ಮಾತನಾಡುವ ಪ್ರಸಂಗ ಬಂದೊದಗಿದೆ. ಯಾವಾಗ ಕೊರೊನಾ ಹೋಗುತ್ತೋ ಎಂಬ ಆತಂಕದ ಜೊತೆ ಸಂಬಂಧಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

ಸಿಟಿಯಲ್ಲಿ ಅಪರಿಚಿತರು ಅಥವಾ ಸಂಬಂಧಿಕರು ಮನೆಗೆ ಬಂದರೆ ಅವರನ್ನು ಉಪಚರಿಸುವ ಮುನ್ನ ನಿಮ್ಮ ಏರಿಯಾದಲ್ಲಿ ಕೊರೊನಾ ಇದೆಯಾ. ಮಾಸ್ಕ್ ಹಾಕೊಳ್ಳಿ, ಸ್ಯಾನಿಟೈಸರ್​​ ಕೊಟ್ಟು ಒಳಗೆ ಕರೆದುಕೊಳ್ಳುವ ಹಾಗೆ ಮಾಡಿದೆ. ಕೊರೊನಾ ಬರುವ ಮುನ್ನ ಎಲ್ಲರೂ ಸಂಬಂಧಿಕರ ಮನೆಗೆ ಹೋಗಿ ತಮ್ಮ ಬೇಜಾರು ಕಳೆದುಕೊಳ್ಳುತ್ತಿದ್ರು. ಇದೀಗ ಕೊರೊನಾ ಬಂದ ಮೇಲೆ ಎಲ್ಲಾ ಶುಭ ಕಾರ್ಯದ ಜೊತೆಗೆ ಮುಖ ನೋಡದೇ ಜೀವನ ಕಳೆಯಬೇಕಾಗಿದೆ. ಆದಷ್ಟು ಬೇಗ ಕೊರೊನಾ ಮುಕ್ತವಾಗಲಿ, ಸಂಬಂಧಗಳು ಗಟ್ಟಿ ಉಳಿಯಲಿ ಎಂದು ಹುಬ್ಬಳ್ಳಿ ಜನತೆ ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.

ABOUT THE AUTHOR

...view details